ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ: ಉಡುಪಿಗೆ 18 ಪದಕ

ಉಡುಪಿ, ಫೆ.12: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ಒಟ್ಟು 100 ಕ್ರೀಡಾಪಟುಗಳು ಭಾಗವಹಿ ಸಿದ್ದು, ಕೂಟದ ವೇಗದ ಓಟಗಾರನಾಗಿ ಜಿಲ್ಲೆಯ ಕಂದಾಯ ಇಲಾಖೆಯ ಶೈಲೇಶ್ ಶೆಟ್ಟಿ ಮೂಡಿಬಂದಿದ್ದಾರೆ.
ಶೈಲೇಶ್ ಶೆಟ್ಟಿ ಅವರು ಎರಡು ಚಿನ್ನದ ಪದಕಗಳನ್ನು ಜಯಿಸಿದ್ದರೆ, ಉಡುಪಿ ಜಿಲ್ಲೆಯ ಸ್ಪರ್ಧಿಗಳು ಒಟ್ಟು 8 ಚಿನ್ನ, 7 ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ ಒಟ್ಟು 18 ಪದಕಗಳನ್ನು ಜಯಿಸಿದ್ದಾರೆ.
ವಿವರ ಹೀಗಿದೆ
ಚಿನ್ನದ ಪದಕ: ಕಂದಾಯ ಇಲಾಖೆಯ ಶೈಲೇಶ್ ಶೆಟ್ಟಿ-100 ಮೀ. ಓಟ ಮತ್ತು ಉದ್ದ ಜಿಗಿತ, ಶಿಕ್ಷಣ ಇಲಾಖೆಯ ಸ್ಮಿತಾ ಜೋಸ್ನಾ ಪೆರ್ನಾಂಡಿಸ್-ಉದ್ದ ಜಿಗಿತ, ಶಿಕ್ಷಣ ಇಲಾಖೆಯ ಗ್ರೇಟಾ- 200 ಮೀ.ಓಟ, ಮಹಿಳೆಯರ 100ಮೀ. ರಿಲೇ- ಗ್ರೇಟಾ, ಸ್ಮಿತಾ, ಆಶಾ ಹಾಗೂ ಮಾಲಿನಿ, ವಾಣಿಜ್ಯ ಇಲಾಖೆ ಸಾರಿಕಾ ಶೆಟ್ಟಿ- 50ಮೀ ಬಟರ್‌ಪ್ಲೈ ಈಜು, ಶಿಕ್ಷಣ ಇಲಾಖೆಯ ಸಾಹಿರಾಬಾನು- ಟೆನಿಕಾಯ್ಟಿ.
ಬೆಳ್ಳಿ ಪದಕ: ಶಿಕ್ಷಣ ಇಲಾಖೆಯ ಗೀತಾ- 100ಮೀ. ಮತ್ತು 200 ಮೀ. ಓಟ, ಆರೋಗ್ಯ ಇಲಾಖೆಯ ಆಶಾ-200 ಮೀ, ಶಿಕ್ಷಣ ಇಲಾಖೆಯ ಓಂಶ್ರೀ ರಾಘವೇಂದ್ರ ನಾಯಕ್- ವೆಯ್ಟಲಿಫ್ಟಿಂಗ್ ಮತ್ತು ಪವರ್‌ಲಿಫ್ಟಿಂಗ್, ಶಿಕ್ಷಣ ಇಲಾಖೆಯ ಮಂಜುನಾಥ ಐತಾಳ್- 50ಮೀ ಬ್ರೆಸ್ಟ್‌ಸ್ಟ್ರೋಕ್ ಈಜು, ವಾಣಿಜ್ಯ ಇಲಾಖೆಯ ಸಾರಿಕಾ ಶೆಟ್ಟಿ- 50 ಮೀ.ಫ್ರೀಸ್ಟೈಲ್ ಈಜು.
ಕಂಚಿನ ಪದಕಗಳು:ನ್ಯಾಯಾಂಗ ಇಲಾಖೆಯ ಮಾಲಿನಿ- 800 ಮೀ. ಓಟ, ಶಿಕ್ಷಣ ಇಲಾಖೆಯ ಗ್ರೇಟಾ- 100 ಮೀ.ಓಟ, ವಾಣಿಜ್ಯ ಇಲಾಖೆಯ ಸಾರಿಕ ಶೆಟ್ಟಿ- 50 ಮೀ. ಬ್ರೆಸ್ಟ್‌ಸ್ಟ್ರೋಕ್ ಈಜು.
ವಿಜೇತರೊಂದಿಗೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಖಜಾಂಚಿ ಚಂದ್ರಶೇಖರ್, ಕಾರ್ಯದರ್ಶಿ ಉದ್ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ರವೀಂದ್ರ ಹೆಬ್ಬಾರ್, ಕಾರ್ಕಳ ತಾಲೂಕು ಅಧ್ಯಕ್ಷ ಮೈಕಲ್ ಜೋಕಿಂ ಹೆಚ್. ಪಿಂಟೋ, ಕಾಪು ತಾಲೂಕು ಅಧ್ಯಕ್ಷ ನಾಗೇಶ್ ಬಿಲ್ಲವ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ, ಪ್ರಶಾಂತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಮಂಜುಳಾ ಜಯಕರ ಜೊತೆ ಕಾರ್ಯದರ್ಶಿ ರವಿ ಕುಮಾರ್, ರಾಘವೇಂದ್ರ ಮಧ್ಯಸ್ಥ, ಶಿವಾನಂದ ಹಾಗೂ ರೋಣ ಶರೀಪ್ ಉಪಸ್ಥಿತರಿದ್ದರು.







