ವಿಎಎ ಸ್ಟಾರ್ಟ್‌ಅಪ್ ಕ್ವೆಸ್ಟ್ ಬಿಜ್ ಪಿಚ್ ಸ್ಪರ್ಧೆ: ಸಹ್ಯಾದ್ರಿ ಕಾಲೇಜಿನ ಡ್ರೀಮ್ ಕಿಟ್ ಟಾಪ್-3ರಲ್ಲಿ ಆಯ್ಕೆ

ಮಂಗಳೂರು, ಫೆ.12: ವಿಶ್ವ ಕೊಂಕಣಿ ಅಸೋಸಿಯೇಷನ್(ಡಬ್ಲುಕೆಎ) ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಎಎ ಸ್ಟಾರ್ಟ್‌ಅಪ್ ಕ್ವೆಸ್ಟ್ ಬಿಜ್ ಪಿಚ್‌ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಪ್ರತಿನಿಧಿಸಿ ಡಿಟಿ ಲ್ಯಾಬ್ಸ್ ಉತ್ಪನ್ನ ಡ್ರೀಮ್ ಕಿಟ್‌ನ್ನು ಪ್ರಸ್ತುತಪಡಿಸಿದರು.
ಸಹ್ಯಾದ್ರಿ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಆಶೀಶ್ (ಅಂತಿಮ ವರ್ಷ) ಮತ್ತು ಪುಷ್ಪರಾಜ್ ಆಡ್ಕಾ (ಮೂರನೇ ವರ್ಷ) ಕಾಲೇಜಿನಿಂದ ಪ್ರತಿನಿಧಿಸಿದ್ದರು.
ಇನ್ಫೋಸಿಸ್‌ನಿಂದ ರಾಜೇಶ್ ಕಾಮತ್ ಮತ್ತು ಮಂಗಳೂರು ಇನ್ಫೋಟೆಕ್ ಸಿಇಒ ಮತ್ತು ಸ್ಥಾಪಕ ಪ್ರಶಾಂತ್ ನೇತೃತ್ವದ ತೀರ್ಪುಗಾರರ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಸಿತು. ಇದರಲ್ಲಿ ಟಾಪ್ 3ನೇ ಸ್ಥಾನವು ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಡ್ರೀಮ್ ಕಿಟ್‌ಗೆ ಒಲಿಯಿತು.
ಸಹ್ಯಾದ್ರಿ ವಿದ್ಯಾರ್ಥಿ ತಂಡ 10 ಸಾವಿರ ರೂ. ನಗದು ಬಹುಮಾನ ಗಳಿಸಿತು. ಮಣಿಪಾಲ್ ಜಾಗತಿಕ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ವಿಜೇತರಿಗೆ ‘ಪ್ರೇರಣಾ-2019’ ಪ್ರಶಸ್ತಿ ವಿತರಿಸಿದರು.







