Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ...

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಮಾಮ್: ಬೆಚ್ಚಿಬೀಳುವಂತಿದೆ ಸಾಕ್ಷಿಗಳ ಹೇಳಿಕೆ

ಶ್ರೀದೇವಿ ಜಯರಾಜನ್, thenewsminute.comಶ್ರೀದೇವಿ ಜಯರಾಜನ್, thenewsminute.com12 Feb 2019 10:54 PM IST
share
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಮಾಮ್: ಬೆಚ್ಚಿಬೀಳುವಂತಿದೆ ಸಾಕ್ಷಿಗಳ ಹೇಳಿಕೆ

ಕೇರಳದ ತಿರುವನಂತಪುರದಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ಇಮಾಮ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ವಾರದ ಬಳಿಕ, ಈ ಘಟನೆಯ ಬಗ್ಗೆ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಲು ಹಲವು ಸಾಕ್ಷಿಗಳು ಮುಂದೆ ಬಂದಿದ್ದಾರೆ. ತೋಲಿಕೋಡ್ ಮುಸ್ಲಿಂ ಮಸೀದಿಯ ಇಮಾಮ್ ಹಾಗೂ ಕೇರಳ ಇಮಾಮ್‍ ಗಳ ಮಂಡಳಿಯ ಸದಸ್ಯನೂ ಆಗಿರುವ ಆರೋಪಿ ಶಫೀಕ್ ಅಲ್ ಖಾಸಿಮಿ, ತಿರುವನಂತಪುರ ಜಿಲ್ಲೆಯ ವಿಥುರಾ ಎಂಬಲ್ಲಿನ ಅರಣ್ಯ ಪ್ರದೇಶಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಆಸೆ ತೋರಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆಪಾದಿಸಲಾಗಿದೆ.

ಅದೇ ಪ್ರದೇಶದ ಮಹಿಳಾ ಕಾರ್ಯಕರ್ತರ ಗುಂಪೊಂದು ಇವನನ್ನು ಹಿಡಿದಿದ್ದು, ಈ ಅರಣ್ಯ ಪ್ರದೇಶಕ್ಕೆ ಬಾಲಕಿಯನ್ನು ಇಮಾಮ್ ಕರೆತಂದಿದ್ದಾನೆ ಎಂದು ಹಲವು ಮಾಧ್ಯಮಸಂಸ್ಥೆಗಳ ಮುಂದೆ ಈ ಸಂಘಟನೆಗಳು ಹೇಳಿಕೊಂಡಿವೆ.

ಈ ಘಟನೆ ಹಿನ್ನೆಲೆಯಲ್ಲಿ ತೋಲಿಕೋಡ್ ಮುಸ್ಲಿಂ ಮಸೀದಿ ಸದಸ್ಯರ ತಂಡ ಹಾಗೂ ತಿರುವನಂತಪುರದಲ್ಲಿ ಲಿಂಗ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ಹೋರಾಟ ಸಂಸ್ಥೆಯಾದ ಸೆಂಟರ್ ಫಾರ್ ಫಿಲ್ಮ್ ಜೆಂಡರ್ ಆ್ಯಂಡ್ ಕಲ್ಚರ್ ಸ್ಟಡೀಸ್‍ ನ ಪ್ರತ್ಯೇಕ ತಂಡಗಳು ಈ ಬಗ್ಗೆ ತನಿಖೆ ನಡೆಸಿವೆ.

ಇಮಾಮ್ ಈ ಲೈಂಗಿಕ ಕಿರುಕುಳದಲ್ಲಿ ಶಾಮೀಲಾಗಿದ್ದಾನೆ ಎನ್ನುವುದನ್ನು ತಾವು ಹೇಗೆ ದೃಢಪಡಿಸಿಕೊಂಡಿದ್ದೇವೆ ಎಂಬ ವಿವರಗಳನ್ನು ತೋಲಿಕೋಡ್ ಮುಸ್ಲಿಂ ಮಸೀದಿಯ ಅಧ್ಯಕ್ಷ ಬಾದುಷಾ ಅವರು ನೀಡಿರುವ 15 ನಿಮಿಷಗಳ ಆಡಿಯೊ ತುಣುಕು ಟಿಎನ್‍ಎಂಗೆ ಲಭ್ಯವಾಗಿವೆ.

"ಘಟನೆ ನಡೆದಿದೆ ಎನ್ನಲಾದ ಅರಣ್ಯ ಪ್ರದೇಶಕ್ಕೆ ನಾವು ಭೇಟಿ ನೀಡಿದ್ದೆವು. ಇಮಾಮ್ ಅವರನ್ನು ಪ್ರಶ್ನಿಸಿದ ಮಹಿಳಾ ಕಾರ್ಯಕರ್ತರು ಮತ್ತು ಸಾಕ್ಷಿಗಳ ಜತೆ ನಾವು ಮಾತನಾಡಿದ್ದೆವು. ಕೆಎಲ್ 18, 6114 ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಇನ್ನೋವಾ ಕಾರು ಆ ಪ್ರದೇಶದ ಮೂಲಕ ಹಾದು ಹೋಗಿತ್ತು ಹಾಗೂ ಆ ಕಾರಿನ ಪರದೆಗಳನ್ನು ಇಳಿಯಬಿಡಲಾಗಿತ್ತು. ಇದಲ್ಲದೇ ಅಲ್ಲಿಗೆ ಧಾವಿಸಿದ ಮಹಿಳಾ ಕಾರ್ಯಕರ್ತರು ಬುರ್ಖಾ ಧರಿಸಿದ್ದ ಬಾಲಕಿಯನ್ನು ನೋಡಿದರು. ಆದ್ದರಿಂದ ಆಕೆಯ ಗುರುತು ಬಹಿರಂಗವಾಗಲಿಲ್ಲ. ಅವರು ಇಮಾಮ್‍ ರನ್ನು ಪ್ರಶ್ನಿಸಿದ್ದಾರೆ. ಆಗ ಆಕೆ ತನ್ನ ಪತ್ನಿ ಎಂದು ಅವರು ಸುಳ್ಳು ಹೇಳಿದ್ದಾಗಿ ಮಹಿಳೆಯರು ಮತ್ತು ಸಾಕ್ಷಿಗಳು ಹೇಳಿದ್ದಾರೆ" ಎಂದು ಬಾದುಷಾ ಹೇಳುತ್ತಿರುವುದು ಆಡಿಯೊ ಕ್ಲಿಪ್‍ ನಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ.

ಆ ಬಳಿಕ ಮಹಿಳೆಯರು ಕಾರಿನಲ್ಲಿ ಶಾಲಾ ಸಮವಸ್ತ್ರ ಮತ್ತು ಸ್ಕೂಲ್ ಬ್ಯಾಡ್ಜ್ ಇದ್ದುದನ್ನು ನೋಡಿದ್ದಾರೆ. ನಲುವತ್ತು ವರ್ಷದ ವ್ಯಕ್ತಿಗೆ ಹದಿನೈದು ವರ್ಷದ ಬಾಲಕಿ ಪತ್ನಿಯಾಗಲು ಹೇಗೆ ಸಾಧ್ಯ ಎಂದು ಮಹಿಳೆಯರು ಇಮಾಮ್‍ ರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಇಮಾಮ್ ಗುಂಪಿನ ಸದಸ್ಯರನ್ನು ಉದ್ದೇಶಿಸಿ ಚೀರಾಡಿದ. ಆ ಬಳಿಕ ಇಮಾಮ್ ಬಾಲಕಿಯನ್ನು ಕಾರಿನ ಒಳಕ್ಕೆ ಎಳೆದುಕೊಂಡು ಹಿಮ್ಮುಖವಾಗಿ ಚಲಾಯಿಸಿದ. ಇದರಿಂದ ಕಾರು ಹಿಂದಿನ ಕಂಬಕ್ಕೆ ಡಿಕ್ಕಿ ಹೊಡೆಯಿತು. ಆ ಬಳಿಕ ಇಮಾಮ್‍ ಗೆ ಸೇರಿದ ಕಾರನ್ನು ಪರಿಶೀಲಿಸಿದಾಗ, ವಾಹನದ ಹಿಂಭಾಗ ನಜ್ಜುಗುಜ್ಜಾಗಿರುವುದು ಗಮನಕ್ಕೆ ಬಂದಿದ್ದನ್ನು ಮಹಿಳೆಯರು ತಿಳಿಸಿದ್ದಾರೆ ಎಂದು ಬಾದುಷಾ ಆಡಿಯೊ ತುಣುಕಿನಲ್ಲಿ ಹೇಳಿದ್ದಾರೆ.

ಇಮಾಮ್ ತಪ್ಪಿಸಿಕೊಳ್ಳಲು ಮುಂದಾದಾಗ, ತಮ್ಮ ನೆರೆಹೊರೆಯ ಹುಡುಗರಿಗೆ ಈ ಮಹಿಳೆಯರು ಮಾಹಿತಿ ನೀಡಿದ್ದಾರೆ. ಅವರು ಬೈಕ್‍ ಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ, ಘಟನೆ ನಡೆದಿದೆ ಎನ್ನಲಾದ ಪೆಪ್ಪರಾ ಪ್ರದೇಶದಿಂದ ವಿಥುರಾ ಪ್ರದೇಶವನ್ನು ದಾಟಿಕೊಂಡು ಕಾರು ಮುಂದೆ ಹೋಗಿದ್ದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರನ್ನು ಬೆನ್ನಟ್ಟಿಕೊಂಡು ಹೋದ ಹಲವು ಹುಡುಗರು ಕೂಡಾ ನಮ್ಮೊಂದಿಗೆ ಇದ್ದಾರೆ. ಕಾರಿನ ಒಳಗೆ ಬಾಲಕಿ ಲೈಂಗಿಕ ಸಂಬಂಧದಲ್ಲಿ ಇದ್ದುದು ಪತ್ತೆಯಾಗಿದೆ. ಈ ಬಗ್ಗೆ ಅವರು ನಮಗೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬಾದುಷಾ ವಿವರಿಸಿದ್ದಾರೆ ಎನ್ನಲಾಗಿದೆ.

ಇಮಾಮ್ ತೋಲಿಕೋಡ್ ಮಸೀದಿಗೆ ಆಗಮಿಸುವ ಸಂದರ್ಭದಲ್ಲಿ ಮತ್ತು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಇನ್ನೂ ಅವರು ಸಹಜ ಸ್ಥಿತಿಯಲ್ಲಿ ಇದ್ದಿರಲಿಲ್ಲ ಎಂದು ಆಡಿಯೊ ತುಣುಕಿನಲ್ಲಿ ಹೇಳಲಾಗಿದೆ. ಮಸೀದಿಯ ಮೇಲೆ ಇಮಾಮ್ ವಾಸ್ತವ್ಯ ಇದ್ದರು.

ಸೆಂಟರ್ ಫಾರ್ ಫಿಲ್ಮ್ ಜೆಂಡರ್ ಆ್ಯಂಡ್ ಕಲ್ಚರ್ ಸ್ಟಡೀಸ್ ಕೂಡಾ ಮಹಿಳಾ ಸಾಕ್ಷಿಗಳ ಜತೆ ಮಾತನಾಡಿದ್ದು, ಈ ಘಟನಾವಳಿಯನ್ನು ಅವರು ದೃಢಪಡಿಸಿದ್ದಾರೆ.

ಹಿಂದೆಯೂ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಆರೋಪಿ?

ಇನ್ನೊಂದು ಆಘಾತಕಾರಿ ಬೆಳವಣಿಗೆಯಲ್ಲಿ, ಇಮಾಮ್ ಈ ಹಿಂದೆ ಕೂಡಾ ಲೈಂಗಿಕ ಕಿರುಕುಳ ನಡೆದಿದೆ ಎನ್ನಲಾದ ಪೆಪ್ಪರಾ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದರು ಎನ್ನುವುದನ್ನು ಬಾದುಷಾ ಹೇಳಿದ್ದಾರೆ.

"ಇದು ತೀರಾ ನಿರ್ಜನ ಪ್ರದೇಶ. ಈ ಪ್ರದೇಶಕ್ಕೆ ಹೋಗುವುದೇ ಅಸಾಧ್ಯ ಎನ್ನುವುದೇ ಜನಸಾಮಾನ್ಯರ ನಂಬಿಕೆ. ತೋಲಿಕೋಡ್ ಮಸೀದಿಯ ಸದಸ್ಯರೂ ಆಗಿರುವ ಸ್ನೇಹಿತ ಬಶೀರ್ ಮನ್ನಾನಿ ಜತೆ ನಾನು ಮಾತನಾಡಿದಾಗ, ಕಳೆದ ವಾರ ಕೂಡಾ ಇದೇ ಪ್ರದೇಶದಲ್ಲಿ ಇಮಾಮ್ ಅವರನ್ನು ಪತ್ತೆ ಮಾಡಲಾಗಿತ್ತು” ಎಂದು ತಿಳಿಸಿದ್ದಾರೆ. ಈ ಪ್ರದೇಶಕ್ಕೆ ಬಂದ ಇಮಾಮ್ ಸುಮಾರು 30 ನಿಮಿಷಗಳ ಬಳಿಕ ಹೊರಬಂದದ್ದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ. ಬಶೀರ್ ಅವರನ್ನು ಮನೆಗೆ ಬರುವಂತೆ ಆಹ್ವಾನಿಸಿದಾಗ ಇಮಾಮ್ ನಿರಾಕರಿಸಿದರು. “ನನ್ನ ಮಗಳು ಈ ಪ್ರದೇಶವನ್ನು ವೀಕ್ಷಿಸಲು ಇಚ್ಛೆ ವ್ಯಕ್ತಪಡಿಸಿದ್ದರಿಂದ ಬಂದದ್ದಾಗಿ ಇಮಾಮ್ ಹೇಳಿದ್ದರು” ಎಂದೂ ಬಶೀರ್ ವಿವರಿಸಿದ್ದಾರೆ

ಇಮಾಮ್ ವಿರುದ್ಧ ಪ್ರಕರಣ

ಈ ಘಟನೆ ವಾರದ ಹಿಂದೆ ನಡೆದಿದ್ದರೂ, ಪೊಲೀಸರು ಇದುವರೆಗೂ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಕೂಡಾ ದೂರು ನೀಡಲು ಅಥವಾ ತಮ್ಮ ಹೇಳಿಕೆಗಳನ್ನು ದಾಖಲಿಸಲು ಮುಂದೆ ಬಂದಿಲ್ಲ.

ವಿಡಿಯೊ ತುಣುಕೊಂದರಲ್ಲಿ ಬಾದುಷಾ, "ಕಾರ್ಯಕರ್ತರು ಬಾಲಕಿಯನ್ನು ನೋಡಿದ್ದರು. ಮೊದಲು ಆಕೆ ಅಳುತ್ತಾ, ಪೊಲೀಸರಿಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಳು" ಎಂದು ಹೇಳಿರುವುದು ದಾಖಲಾಗಿದೆ. ಆದರೆ ಇಂಥ ಪ್ರಕರಣಗಳಲ್ಲಿ ದೂರು ನೀಡಲು ಸಂತ್ರಸ್ತೆಯರು ಹಾಜರಿರಬೇಕಾಗಿಲ್ಲ ಎನ್ನುವುದು ಸೆಂಟರ್ ಫಾರ್ ಫಿಲ್ಮ್ ಜೆಂಡರ್ ಆ್ಯಂಡ್ ಕಲ್ಚರ್ ಸ್ಟಡೀಸ್ ಸಂಸ್ಥೆಯ ಅಧ್ಯಕ್ಷೆ ಡಾ.ಆರೀಫಾ ಕುರಟ್ಟುಚ್ಚಲೀಲ್ ಅವರ ಅಭಿಪ್ರಾಯ.

"ಆಕೆಯ ಶಾಲೆಯವರು, ಚೈಲ್ಡ್‍ ಲೈನ್ ಅಥವಾ ಸಾಕ್ಷಿಗಳು ಕೂಡಾ ಈ ಬಗ್ಗೆ ದೂರು ನೀಡಬಹುದು. ಅಪರಾಧ ನಡೆದಿದೆ ಎನ್ನುವುದು ನಮಗೆ ತಿಳಿದುಬಂದಲ್ಲಿ ಹಾಗೂ ಹಲವಾರು ಸಾಕ್ಷಿಗಳು ಅದನ್ನು ದೃಢಪಡಿಸುವುದಾದಲ್ಲಿ, ಪೊಲೀಸರು ಕೂಡಾ ಸ್ವಯಂಪ್ರೇರಿತರಾಗಿ ಇಮಾಮ್ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧ ಕೃತ್ಯಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ) ಅನ್ವಯ ಪ್ರಕರಣ ದಾಖಲಿಸಬಹುದು” ಎಂದು ಅವರು ಹೇಳುತ್ತಾರೆ.

ಸಂತ್ರಸ್ತೆಯನ್ನು ಚೈಲ್ಡ್ ಲೈನ್ ಅಧಿಕಾರಿಗಳು ಕೌನ್ಸಿಲಿಂಗ್‍ ಗೆ ಒಳಪಡಿಸಿದ್ದು, ಆಶ್ರಯಧಾಮಕ್ಕೆ ಆಕೆಯನ್ನು ಕಳುಹಿಸಿಕೊಡಲಾಗಿದೆ. ಈ ಮೂಲಕ ಕುಟುಂಬ ಸದಸ್ಯರು ಈ ಬಗ್ಗೆ ದೂರು ನೀಡದಂತೆ ಆಕೆಯ ಮೇಲೆ ಒತ್ತಡ ತರದಂತೆ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ಆಕೆಯ ಕುಟುಂಬದವರು ತಕ್ಷಣ ಆಶ್ರಯಧಾಮಕ್ಕೆ ಭೇಟಿ ನೀಡಿದ್ದು, ಬಾಲಕಿ ಕುಟುಂಬದವರ ಜತೆ ವಾಪಾಸ್ಸಾಗಿದ್ದಾಳೆ.

"ಹಲವು ಬಾರಿ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯರು ಹಾಗೂ ಅವರ ಕುಟುಂಬದವರು ಸಾಮಾಜಿಕ ಒತ್ತಡದ ಕಾರಣದಿಂದ ತಮ್ಮ ಹೇಳಿಕೆಗಳನ್ನು ನೀಡುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ದೂರು ನೀಡಲು ಬಯಸದ ಕಾರಣದಿಂದ ತಪ್ಪಿತಸ್ಥರು ಬಚಾವಾಗುತ್ತಾರೆ. ಈ ಮಾಹಿತಿ ಸೋರಿಕೆಯಾದಲ್ಲಿ ತಮ್ಮ ಬಾಲಕಿಯ ಭವಿಷ್ಯ ಹಾಳಾಗುತ್ತದೆ ಎಂಬ ಭೀತಿಯಿಂದ ಕುಟುಂಬದವರು ಕೂಡಾ ಇದನ್ನು ರಹಸ್ಯವಾಗಿಡಲು ಬಯಸುತ್ತಾರೆ. ಈ ನಿರ್ದಿಷ್ಟ ಪ್ರಕರಣದಲ್ಲಿ, ಇಮಾಮ್ ಪ್ರಭಾವಿ ವ್ಯಕ್ತಿಯಾಗಿದ್ದು, ಧಾರ್ಮಿಕ ಭೀತಿ ಮತ್ತು ಘನತೆ ಕೂಡಾ ಪ್ರಮುಖವಾಗುತ್ತದೆ. ಅದರೆ ಈ ಎಲ್ಲ ಇತಿಮಿತಿಗಳನ್ನು ಮೀರಿ ಇಮಾಮ್ ಮೇಲೆ ಪ್ರಕರಣ ದಾಖಲಿಸುವುದು ಕಡ್ಡಾಯ. ಆಗ ಮಾತ್ರ ಮಗು ಹೆಚ್ಚು ಸುರಕ್ಷಿತವಾಗುತ್ತದೆ ಹಾಗೂ ತನ್ನ ಹೇಳಿಕೆಯನ್ನು ಮುಕ್ತವಾಗಿ ನೀಡುವ ಸಾಧ್ಯತೆ ಇರುತ್ತದೆ" ಎಂದು ಆರೀಫಾ ವಿವರಿಸುತ್ತಾರೆ.

ಸೆಂಟರ್ ಫಾರ್ ಫಿಲ್ಮ್ ಜೆಂಡರ್ ಆ್ಯಂಡ್ ಕಲ್ಚರ್ ಸ್ಟಡೀಸ್, ಈ ಬಗ್ಗೆ ಮುಖ್ಯಮಂತ್ರಿ, ಡಿಜಿಪಿ ಲೋಕನಾಥ್ ಬೆಹೆರಾ ಮತ್ತು ಆ ಪ್ರದೇಶದ ಲಿಂಗ ಸಮಾನತೆ ಸಲಹೆಗಾರರಿಗೆ ದೂರು ನೀಡಿದೆ. ಈ ಮಧ್ಯೆ ಬಾಲಕಿಯ ಕುಟುಂಬದವರು ದೂರು ನೀಡದ ಕಾರಣ ಈ ಬಗ್ಗೆ ದೂರು ದಾಖಲಿಸಿಕೊಳ್ಳದಿದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

"ಪೊಲೀಸ್ ಅಧಿಕಾರಿ ಒಂದು ಅಪರಾಧಕ್ಕೆ ಸಾಕ್ಷಿಯಾಗಿದ್ದಲ್ಲಿ ಮಾತ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ. ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿಗಳು ಕೂಡಾ ಸಾಕ್ಷಿಯಾಗಿಲ್ಲ ಹಾಗೂ ನಮಗೆ ಗೋಚರವಾಗುವಂತೆ ಘಟನೆ ನಡೆಯದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ" ಎಂದು ತಿರುವನಂತಪುರ ಗ್ರಾಮೀಣ ಎಸ್ಪಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಆರೋಪಿ ಇಮಾಮ್ ಅವರನ್ನು ಅವರ ಕೃತ್ಯಕ್ಕೆ ಶಿಕ್ಷಾರ್ಥವಾಗಿ, ಅಖಿಲ ಭಾರತ ಇಮಾಮ್‍ ಗಳ ಮಂಡಳಿಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಮಂಡಳಿಯ ಫೇಸ್‍ ಬುಕ್ ಪೇಜ್ ಮೂಲಕ ಮಾಹಿತಿ ನೀಡಲಾಗಿದೆ. ಆದರೆ ಈ ಅಮಾನತಿನ ಹಿಂದಿನ ಕಾರಣವನ್ನು ಮಂಡಳಿ ಉಲ್ಲೇಖಿಸಿಲ್ಲ.

share
ಶ್ರೀದೇವಿ ಜಯರಾಜನ್, thenewsminute.com
ಶ್ರೀದೇವಿ ಜಯರಾಜನ್, thenewsminute.com
Next Story
X