ಸಂಸತ್ ಆವರಣದಲ್ಲಿ ಬ್ಯಾರಿಕೇಡ್‌ಗೆ ಗುದ್ದಿದ ಸಂಸದರ ಕಾರು

ಹೊಸದಿಲ್ಲಿ, ಫೆ. 12: ಸಂಸತ್ ಆವರಣದಲ್ಲಿರುವ ಬ್ಯಾರಿಕೇಡ್‌ಗೆ ಮಂಗಳವಾರ ಬೆಳಗ್ಗೆ ಸಂಸದರೊಬ್ಬರ ಕಾರು ಢಿಕ್ಕಿಯಾದ ಬಳಿಕ ದಿಲ್ಲಿಯಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಯಿತು.
ಕಾರು ಮಣಿಪುರದ ಲೋಕಸಭಾ ಸಂಸದ ಡಾ. ಥೊಕ್‌ಚೋಮ್ ಮೈನ್ಯಾ ಅವರಿಗೆ ಸೇರಿದ್ದಾಗಿದೆ. ಕಾರು ಬ್ಯಾರಿಕೇಡ್‌ಗೆ ಗುದ್ದಿದ ಬಳಿಕ, ಭದ್ರತಾ ಸೈರನ್ ಮೊಳಗಿತು. ಕೂಡಲೇ ಭದ್ರತಾ ಸಿಬ್ಬಂದಿ ಯಾವುದೇ ಪ್ರತಿಕೂಲ ಸನ್ನಿವೇಶ ನಿರ್ಮಾಣವಾಗದಂತೆ ಕ್ರಮ ಕೈಗೊಂಡರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕಾರು ಜಖಂಗೊಂಡಿದೆ. ಘಟನೆ ನಡೆಯುವ ಸಂದರ್ಭ ಸಂಸದರು ಕಾರಿನಲ್ಲಿ ಇರಲಿಲ್ಲ. ಘಟನೆಯ ಕಾರಣದ ಬಗ್ಗೆ ಸಂಸತ್ತಿನ ಭದ್ರತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Next Story





