ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕಾಫಿ ತೋಟದಲ್ಲಿ ಪತ್ತೆ

ಸಿದ್ದಾಪುರ (ಕೊಡಗು), ಫೆ.13: ಕಳೆದ ಹತ್ತು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದೆ.
ನೆಲ್ಯಹುದಿಕೇರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಫೆ.4 ರಂದು ಕಾಲೇಜು ಮುಗಿಸಿ ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿರುವ ಮನೆಗೆ ತೆರಳುತ್ತಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಳು.
ಫೆ.10 ರಂದು ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಮನೆಯ ಸಮೀಪದಲ್ಲಿರುವ ಕಾಫಿ ತೋಟದ ಪೊದೆಯೊಂದರಲ್ಲಿ ಪತ್ತೆಯಾದ ಬಳಿಕ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿತ್ತು.
ಬ್ಯಾಗ್ ಮತ್ತು ಶೂ ಪತ್ತೆಯಾದ ಸ್ಥಳದಿಂದ ಸುಮಾರು 1 ಕಿ.ಮೀ ದೂರದ ಬಂಡೆ ಕಲ್ಲಿನ ಗುಹೆಗಳ ಒಳಗೆ ಬುಧವಾರ ಮೃತದೇಹ ಪತ್ತೆಯಾಗಿದ್ದು, ಪಶ್ಚಿಮ ಬಂಗಾಳ ಮೂಲದ ಇಬ್ಬರನ್ನು ಬಂಧಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
Next Story





