ಭಾರತ-ಅಮೆರಿಕ ರಕ್ಷಣಾ ವ್ಯಾಪಾರ ಸಾರ್ವಕಾಲಿಕ ಅಧಿಕ: ಪೆಂಟಗನ್
ವಾಶಿಂಗ್ಟನ್, ಫೆ. 13: ಭಾರತ ಮತ್ತು ಅಮೆರಿಕಗಳ ನಡುವಿನ ರಕ್ಷಣಾ ವ್ಯವಹಾರಗಳು ಸಾರ್ವಕಾಲಿಕ ಗರಿಷ್ಠ ಪ್ರಮಾಣದಲ್ಲಿವೆ ಹಾಗೂ ದ್ವಿಪಕ್ಷೀಯ ಭಾಗೀದಾರಿಕೆಯು ಐತಿಹಾಸಿಕ ವೇಗದಲ್ಲಿ ಮುನ್ನಡೆಯುತ್ತಿದೆ ಎಂದು ಯುಎಸ್-ಇಂಡೋ ಪೆಸಿಫಿಕ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಫಿಲಿಪ್ಸ್ ಡೇವಿಡ್ಸನ್ ಹೇಳಿದ್ದಾರೆ.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಪ್ರಥಮ 2+2 ಸಚಿವ ಮಟ್ಟದ ಮಾತುಕತೆ ಹಾಗೂ 2018ರಲ್ಲಿ ‘ಸಿಒಎಮ್‌ಸಿಎಎಸ್‌ಎ’ ಒಪ್ಪಂದಕ್ಕೆ ಸಹಿ ಹಾಕಿರುವುದು ದ್ವಿಪಕ್ಷೀಯ ಬಾಂಧವ್ಯದ ಮಹತ್ವ ಗಳಿಗೆಗಳು ಎಂಬುದಾಗಿ ಸಂಸತ್ತು ಕಾಂಗ್ರೆಸ್‌ನಲ್ಲಿ ಮಂಗಳವಾರ ನಡೆದ ವಿಚಾರಣೆಯ ವೇಳೆ ಅವರು ಹೇಳಿದರು.
ಎರಡು ಸೇನೆಗಳ ನಡುವೆ ಜಂಟಿ ಕಾರ್ಯಾಚರಣೆಗೆ ಹಾಗೂ ಉನ್ನತ ದರ್ಜೆಯ ತಂತ್ರಜ್ಞಾನದ ಮಾರಾಟಕ್ಕೆ ಅವಕಾಶ ಮಾಡಿಕೊಡುವ ‘ಸಿಒಎಮ್‌ಸಿಎಎಸ್‌ಎ’ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಕಳೆದ ವರ್ಷ ಸಹಿ ಹಾಕಿರುವುದನ್ನು ಸ್ಮರಿಸಬಹುದಾಗಿದೆ.
Next Story