ಕೇಂದ್ರ ಸರಕಾರದ ಇಲಾಖೆಗಳಲ್ಲಿ 4.12 ಲಕ್ಷ ಹುದ್ದೆಗಳು ಖಾಲಿ

ಹೊಸದಿಲ್ಲಿ, ಫೆ. 13: ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 4.12 ಲಕ್ಷಕ್ಕೂ ಅಧಿಕ ಹುದ್ದೆಗಳು 2016ರಲ್ಲಿ ಖಾಲಿ ಬಿದ್ದಿವೆ ಎಂದು ಕೇಂದ್ರ ಸರಕಾರ ಬುಧವಾರ ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ಮೂಲಕ ತಿಳಿಸಿತು. ಖಾಲಿ ಇರುವ ಒಟ್ಟು 4,12,752 ಹುದ್ದೆಗಳಲ್ಲಿ 15,284 ಗ್ರೂಪ್ ಎ ಹುದ್ದೆಗಳು, 76,050 ಬಿ ಗ್ರೂಪ್ ಹುದ್ದೆಗಳು ಹಾಗೂ 3,21,418 ಗ್ರೂಪ್ ಸಿ ಹುದ್ದೆಗಳು.
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಪಾವತಿ ಸಂಶೋಧನಾ ಘಟಕ ಪ್ರಕಟಿಸಿದ ಕೇಂದ್ರ ಸರಕಾರದ ಉದ್ಯೋಗಿಗಳ ವೇತನ ಹಾಗೂ ಭತ್ಯೆಯ ವಾರ್ಷಿಕ ವರದಿಯ ಆಧಾರದಲ್ಲಿ ಈ ಹುದ್ದೆಗಳು ಖಾಲಿ ಇರುವುದಾಗಿ ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಸ್ಥೆಗಳು ನೇಮಕಾತಿ ನಿಯಮದಂತೆ ನಿಯೋಜಿಸಿಕೊಳ್ಳುವ ಅಗತ್ಯತೆ ಇದೆ ಎಂದು ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
Next Story