ವಿರೋಧಿಗಳ ಸಾವು ಬಯಸುವಷ್ಟು ಅಧೋಗತಿಗೆ ರಾಜಕಾರಣಿಗಳು ಇಳಿಯಬಾರದು: ಸಿದ್ದರಾಮಯ್ಯ

ಬೆಂಗಳೂರು, ಫೆ. 14: ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈ ದುರ್ಬುದ್ಧಿ ಬಿಜೆಪಿ ರಕ್ತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಹಿಂದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ್ದ ಮಾತನ್ನೇ ಈ ರಾಜ್ಯದ ಬಿಜೆಪಿ ನಾಯಕರು ದೇವೇಗೌಡದ ಕುಟುಂಬದ ಬಗ್ಗೆ ಹೇಳಿದ್ದಾರೆ. ಇದು ಖಂಡನೀಯ ನಡವಳಿಕೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಆಪರೇಷನ್ ಕಮಲದ ಆಡಿಯೋ ಸಂಭಾಷಣೆ ಆಘಾತಕಾರಿಯಾಗಿದೆ. ಇಡೀ ದೇಶದ ಮುಂದೆ ಬಿಜೆಪಿಯ ಬಣ್ಣ ಬಯಲಾಗಿದೆ. ರಾಜ್ಯದ ಬಿಜೆಪಿ ಸ್ವಚ್ಛ, ಸಜ್ಜನರು, ಸಂಘ ಪರಿವಾರದ ಸಂಸ್ಕೃತಿ ರಕ್ಷಕರು ಯಾವ ಬಿಲದಲ್ಲಿ ಆಡಗಿದ್ದಾರೆ ಎಂದು ಸಿದ್ದರಾಮಯ್ಯ ಮತ್ತೊಂದು ಟ್ವಿಟ್‌ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Next Story





