ಉಡುಪಿ: ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯುವ ಕಾಂಗ್ರೆಸ್‌ನಿಂದ ಮನವಿ

ಉಡುಪಿ, ಫೆ.13: ಆಡಳಿತ ಪಕ್ಷದ ಶಾಸಕರನ್ನು 10 ಕೋಟಿ ರೂ. ನೀಡಿ ಖರೀದಿಸುವ, ದೇಶದ ಪ್ರಧಾನಿ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯ ವಿಧಾನಸಭಾ ಸಭಾಧ್ಯಕ್ಷರ ಹೆಸರನ್ನು ಆಡಿಯೋ ಟೇಪ್‌ನಲ್ಲಿ ಪ್ರಸ್ತಾಪಿಸಿ ರಾಜ್ಯದ ಜನತೆಯಲ್ಲಿ ಗೊಂದಲವನ್ನುಂಟುಮಾಡಿದ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಇಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರಿಗೆ ಮನವಿ ನೀಡಿ ಆಗ್ರಹಿಸಿದೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ನೇತೃತ್ವದ ಯುವ ಕಾಂಗ್ರೆಸ್ ನಿಯೋಗದಲ್ಲಿ ಪ್ರಶಾಂತ್ ಪೂಜಾರಿ, ದೀಪಕ್ ಕೋಟ್ಯಾನ್, ಶೇಖರ್ ಪೂಜಾರಿ, ಜೋಯಲ್ ಮಥಾಯಸ್, ದಿನೇಶ್ ನಾಯಕ್, ಹರೀಶ್ ಪೂಜಾರಿ, ಮಣಿಕಂಠ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
Next Story





