ಮುಂದಿನ ವಾರ ಸೌದಿ ಯುವರಾಜ ಸಲ್ಮಾನ್ ಭಾರತ ಭೇಟಿ
ರಿಯಾದ್, ಫೆ. 13: ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಫೆಬ್ರವರಿ 19ರಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.
ತನ್ನ ಭಾರತ ಭೇಟಿಯ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಇಂಧನ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಹಾಗೂ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಇದು ಸೌದಿ ಯುವರಾಜ ಮುಹಮ್ಮದ್ ಭಾರತಕ್ಕೆ ನೀಡುತ್ತಿರುವ ಪ್ರಥಮ ಸರಕಾರಿ ಭೇಟಿಯಾಗಿದೆ. ಅವರು ಸಚಿವ ಸಂಪುಟದ ಉಪಾಧ್ಯಕ್ಷ ಹಾಗೂ ರಕ್ಷಣಾ ಸಚಿವರೂ ಆಗಿದ್ದಾರೆ.
ಯುವರಾಜ ಮುಹಮ್ಮದ್ ಜೊತೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ಸೌದಿ ಉದ್ಯಮಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೂ ಬರಲಿದೆ.
ಅದಕ್ಕೂ ಮುನ್ನ, ಈ ವಾರಾಂತ್ಯದಲ್ಲಿ ಸೌದಿ ಯುವರಾಜ ಪಾಕಿಸ್ತಾನಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.
Next Story