ಗಾಂಜಾ ಸೇವನೆ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಫೆ.13: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಲ್ ಗಾರ್ಡ್‌ನ ಬೋಟ್ ಯಾರ್ಡ್ ಮತ್ತು ಸುಲ್ತಾನ್ ಬತ್ತೇರಿ ಬಳಿ ಗಾಂಜಾ ಸೇವನೆ ಆರೋಪದಲ್ಲಿ ಇಬ್ಬರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿ ನಡುಪಳ್ಳಿ ಮಸೀದಿಯ ಬಳಿಯ ಮುಹಮ್ಮದ್ ರಿಝ್ವಾನ್ (22), ಡೊಂಗರಕೇರಿ ನಿವಾಸಿ ರಾಹುಲ್ ಗಟ್ಟಿ (20) ಬಂಧಿತರು. ಇವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬರ್ಕೆ ಠಾಣೆ ಇನ್‌ಸ್ಪೆಕ್ಟರ್ ಉಮೇಶ್ ಯು. ಅವರ ನೇತೃತ್ವದಲ್ಲಿ ಪಿಎಸ್ಸೈ ಶೋಭಾ, ಸಿಬ್ಬಂದಿ ಗಣೇಶ್, ಕೇಂದ್ರ ರೌಡಿ ನಿಗ್ರಹ ದಳದ ಸಿಬ್ಬಂದಿ ಸಂತೋಷ್, ವೆಲೆಸ್ಟಿನ್ ಜಾರ್ಜ್ ಡಿಸೋಜ, ಕಿಶೋರ್, ಪ್ರಮೋದ್, ನಾಗರಾಜ್ ಮತ್ತು ಬಸವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Story





