ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಮಹೋತ್ಸವ

ಮಂಗಳೂರು, ಫೆ.14: ಸಂತ ಆಂತೋನಿಯ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ಎಂಟನೇ ದಿನದ ಬಲಿ ಪೂಜೆಯನ್ನು ಬುಧವಾರ ನಗರದ ಮಿಲಾಗ್ರಿಸ್ ದೇವಾಲಯದಲ್ಲಿ ಬಂಟ್ವಾಳ ಯೇಸುಬಾಲಕ ದೇವಾಲಯದ ಧರ್ಮಗುರು ಫಾ. ವಾಲ್ಟರ್ ಡಿಮೆಲ್ಲೊ ಧರ್ಮಸಭೆಯ ಹಿರಿಯ ಸದಸ್ಯರಿಗಾಗಿ ಅರ್ಪಿಸಿದರು.
ಬಳಿಕ ಸಂದೇಶ ನೀಡಿದ ಅವರು ವಾಣಿಜ್ಯೀಕರಣಗೊಂಡ ಇವತ್ತಿನ ಸಮಾಜದಲ್ಲಿ ಎಲ್ಲವನ್ನೂ ಉಪಯುಕ್ತತೆಯ ಮೇಲೆ ಹೊಂದಿಕೊಂಡು ಬೆಲೆ ಕಟ್ಟುತ್ತಾರೆ. ಎಷ್ಟರತನಕ ಒಬ್ಬ ವ್ಯಕ್ತಿಯು ಉಪಯೋಗಕ್ಕೆ ಬರುತ್ತಾರೆಯೋ ಅಷ್ಟರವರೆಗೆ ಆ ವ್ಯಕ್ತಿಗೆ ಗೌರವ ನೀಡುತ್ತಾರೆ. ಒಂದು ಸಲ ವ್ಯಕ್ತಿಯ ಉಪಯುಕ್ತತೆ ಮುಗಿಯುತು ಎಂದಾದರೆ ಆ ವ್ಯಕ್ತಿಯನ್ನು ಒಂದು ಹೊರೆಯಾಗಿ ಕಾಣುತ್ತಾರೆ. ಇದು ಸರಿಯಾದ ಯೋಚನೆ ಅಲ್ಲ ಎಂದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ತೃಶಾನ್ ಡಿಸೋಜ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ವಂದಿಸಿದರು.
Next Story





