ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಗಾಯಾಳು ಮೃತ್ಯು: ಆರೋಪ
ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಲು ಆಗ್ರಹ

ಮಂಗಳೂರು, ಫೆ.14: ನಗರದ ಹೊರವಲಯ ಅಡ್ಯಾರ್‌ಕಟ್ಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಗುರುಪುರ ಮುಹಮ್ಮದ್ ಹಫೀಝ್ (22) ನಿಧನಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಗುರುಪುರ ಯುನೈಟೆಡ್ ಫ್ರೆಂಡ್ಸ್ ಸದಸ್ಯರು ಹಾಗೂ ಮೃತನ ಸಂಬಂಧಿಕರು ಮಂಗಳೂರು ನಗರ ಪೋಲೀಸ್ ಕಮೀಷನರ್ ಹಾಗೂ ದ.ಕ.ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೃತ ಮುಹಮ್ಮದ್ ಹಫೀಝ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸ್ಪಂದಿಸಬೇಕಾದ ಆಸ್ಪತ್ರೆಯ ತುರ್ತು ನಿಗಾ ಘಟಕದ ವೈದ್ಯ ಡಾ.ಮುಬಾರಕ್ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಚಿಕಿತ್ಸೆ ಫಲಕಾರಿಯಾಗದೇ ಹಫೀಝ್ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ನ್ಯಾಯವಾದಿ ಇಕ್ಬಾಲ್ ಗುರುಪುರ, ಎನ್.ಇ. ಮುಹಮ್ಮದ್, ಮುಹಮ್ಮದ್ ನಸ್ ನಾಸ್, ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಅಧ್ಯಕ್ಷ ಅಝರ್ ಎಂ.ಎಸ್. ಮತ್ತಿತರರು ಉಪಸ್ಥಿತರಿದ್ದರು.






.jpg)

