ಉಡುಪಿ: ವಿದ್ಯಾರ್ಥಿಗಳಿಂದ ಯೋಧರಿಗೆ ನಮನ

ಉಡುಪಿ, ಫೆ.15: ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಕಾಶ್ಮೀರ ದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಾಲೇಜಿನಲ್ಲಿ ಶುಕ್ರವಾರ ನಡೆಯಿತು.
ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲಗಂಗಾಧರ್ ರಾವ್, ಕಾಲೇಜು ಉಪನ್ಯಾಸಕರಾದ ಯಾದವ ಯು.ಕೆ, ನಾಗರಾಜ, ಪ್ರಕಾಶ್ ಶೆಟ್ಟಿ, ಗಂಗಾಧರ, ರುದ್ರಪ್ಪ, ಲಕ್ಷ್ಮೀ ಕಾಂತ, ಶೋಭಾ, ದಯಾನಂದ, ಸುಧಾಕರ, ಡೇವಿಡ್, ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Next Story





