Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಟ್ಕಳ: ರಾಜ್ಯ ಮಟ್ಟದ ವಿಚಾರ ಸಂಕೀರಣ...

ಭಟ್ಕಳ: ರಾಜ್ಯ ಮಟ್ಟದ ವಿಚಾರ ಸಂಕೀರಣ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ16 Feb 2019 10:47 PM IST
share
ಭಟ್ಕಳ: ರಾಜ್ಯ ಮಟ್ಟದ ವಿಚಾರ ಸಂಕೀರಣ ಕಾರ್ಯಕ್ರಮ

ಭಟ್ಕಳ, ಫೆ. 16: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ನಡೆದ ಕಾರ್ಯಗಾರವೂ ಉತ್ತಮವಾಗಿದೆ. ಈ ಕಾರ್ಯಗಾರದಿಂದ ಜನರು ಸಹ ತಮ್ಮಲ್ಲಿನ ಪರಿಸರದ ಅಜ್ಞಾನದ ಬಗ್ಗೆ ತಿಳಿಯಲು ಸಾಧ್ಯ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಅವರು ಶನಿವಾರದಂದು ಇಲ್ಲಿನ ಸಾಗರ ರಸ್ತೆಯ ಸಾಲು ಮರದ ತಿಮ್ಮಕ್ಕಉದ್ಯಾನವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೃಕ್ಷ ಲಕ್ಷ ಆಂದೋಲನ ಕರ್ನಾಟಕ, ಸೆಂಟರ್ ಫಾರ್ ಪಾಲಿಸಿ ರಿಸರ್ಚಕಾರವಾರ, ಶ್ರೀ ಶಿವಶಾಂತಿಕಾ ಸಾವಯವ ಪರಿವಾರ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮಲ್ಲಿನ ಪರಿವರ್ತನೆಯಿಂದ ಮಾತ್ರ ಪರಿಸರ ಉಳಿವಿನ ಕಾರ್ಯ ಮಾಡಲು ಸಾಧ್ಯ. ಕೇವಲ ಕಾಟಾಚಾರಕ್ಕೆ ಕಾರ್ಯ ಆಗಬಾರದು ಇದರಿಂದ ಪರಿಸರ ಸಂಬಂಧಿತ ಸಮಸ್ಯೆ, ಪರಿಹಾರ ಪಡೆದುಕೊಂಡುಗುರಿ ಸಾಧಿಸಲು ಸಾಧ್ಯವಿಲ್ಲ. ಸದ್ಯ ಕರಾವಳಿಯಲ್ಲಿ ಹೆದ್ದಾರಿಅಗಲೀಕರಣ ವಿಚಾರವಾಗಿಕಾಮಗಾರಿ ನಡೆಸುವವರು ಉದ್ದೇಶ ಪೂರ್ವಕವಾಗಿಯೋ ಅಥವಾ ಇನ್ಯಾವುದೋ ಕಾರಣದಿಂದ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದ್ದಾರೆ. ನಮ್ಮಲ್ಲಿನ ಖನಿಜ ಸಂಪತ್ತನ್ನು ದೋಚುವ ಉದ್ದೇಶದಿಂದ ಇಲ್ಲಿನ ಮಣ್ಣು, ಕಲ್ಲುಗಳನ್ನು ತೆಗೆದು ಬೇರೆಡೆ ಸಾಗಾಟ ಮಾಡುವ ಹುನ್ನಾರ ಇದರಲ್ಲಿದೆ. ಮೀನುಗಾರಿಕೆಯಲ್ಲಿಯೂ ಸಹ 30% ಇಳಿಮುಖವಾಗಿದೆ. ಲೈಟ್ ಫಿಶ್ಶಿಂಗ್‍ನಿಂದಾಗಿ ಪರಿಸರಕ್ಕೆ ಹಾನಿಯಾಗಿದೆ. ಇವೆಲ್ಲದರ ಅಂಶ ಜನರಿಗೆತಲುಪಬೇಕಾದರೆ ನಿತ್ಯ ನಿರಂತರ ಕಾರ್ಯಕ್ರಮ ಆಗಬೇಕು. ಇಂದಿನ ಯುವ ಪೀಳಿಗೆಗೆ ಇದರ ಬಗ್ಗೆ ಮಾಹಿತಿ ನೀಡಿ ಕಾಲೇಜು ಮಟ್ಟದಲ್ಲಿ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆದ್ದಾರಿಯಲ್ಲಿ ಪಯಣ ಎಂಬ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದಜಿಲ್ಲಾ ಪಂಚಾಯತಅಧ್ಯಕ್ಷ ಜಯಶ್ರೀ ಮೋಗೇರ ಪರಿಸರ ಸಂಬಂಧಿತ ಪೂರಕಕಾರ್ಯಕ್ರಮ ನಡೆಯಬೇಕು. ಪರಿಸರದ ಮೇಲಿನ ಕಾಳಜಿ ಎಲ್ಲರಲ್ಲಿಯೂಜಾಗೃತವಾಗಬೇಕು ಹಾಗೂ ಇದು ನಮ್ಮಕರ್ತವ್ಯ ಸಹ ಆಗಿದೆ. ಕಾರ್ಯಾಗಾರದಲ್ಲಿನಎರಡುಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ನೀಡಲಿರುವ ವಿಚಾರವನ್ನು ಪಡೆದು ಆ ಮೂಲಕ ಪರಿಸರ ಸಂರಕ್ಷಣೆಯಕಾರ್ಯಕ್ಕೆ ಸಹಕಾರಿಯಾಗಲಿದೆ. ಉತ್ತಮಕಾರ್ಯಕ್ಕೆಉತ್ತಮ ಬೆಂಬಲ ಸಾರ್ವಜನಿಕರಿಂದ ಸಿಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಪಶ್ಚಿಮ ಘಟ್ಟಕಾರ್ಯಪಡೆ ಮಾಜಿಅಧ್ಯಕ್ಷಅನಂತ ಹೆಗಡೆ ಆಶೀಸರ ಮಾತನಾಡಿದ್ದು ಪರಿಸರಕ್ಕೆ ನಾವೆನ್ನು ಮಾಡಬೇಕು, ನಾಗರಿಕರಾದ ನಾವು ಏನನ್ನು ನೀಡಿದ್ದೇವೆಂಬ ಚಿಂತನೆ ಆಗಬೇಕು. ಪರಿಸರದ ಸುತ್ತಮುತ್ತಲು ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಈ ಪೈಕಿ ಸಿಆರ್‍ಝಢ್, ಅರಣ್ಯ ಸಮಸ್ಯೆ ಬಗ್ಗೆ ಸೂಕ್ತ ಚರ್ಚೆಗಳಾಗಬೇಕು. ಪಶ್ಛಿಮ ಘಟ್ಟದ ನದಿ ಕಣಿವೆಗಳ ಉಳಿವಿಗೆ ಕರಾವಳಿ ರಕ್ಷಣೆಅಗತ್ಯ. ಅತೀಯಾದ ವಾಣಿಜ್ಯಕರಣದಿಂದ ಇಲ್ಲಿನ ಜೀವ ವೈವಿಧ್ಯಕ್ಕೂ ಕುತ್ತು ಬಂದಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಅನೇಕ ಸಂಕಷ್ಟ, ಸಮಸ್ಯೆಗಳು ಎದುರಾಗಿದ್ದು ಅದರ ಪರಿಹಾರೋಪಾಯಗಳು ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೌಷಧಿ ಮೂಲಿಕಾ ಪ್ರಾಧಿಕಾರ ತಜ್ಞ ಸದಸ್ಯ ಕೇಶವ ಕೂರ್ಸೆ ಪರಿಸರ ಸಂರಕ್ಷಣೆ ಕುರಿತಾಗಿ ಆಶಯ ಭಾಷಣ ಮಾಡಿದರು. ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯಅಧಿಕಾರಿರಾಜಶೇಖರ ಪುರಾಣಿಕಅವರು ಹೆದ್ದಾರಿಅಗಲೀಕರಣದಲ್ಲಿಜನರಿಂದ ಬಂದಂತಹ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ವಿವರಿಸಿದರು.

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್‍ ಅಧ್ಯಕ್ಷತೆ ವಹಿಸಿದ್ದರು.

ಈ ಸಂಧರ್ಭದಲ್ಲಿಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷಗಣೇಶ ಪ್ರಸಾದ ಪಾಂಡೇಲು, ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಬಿ.ಎಚ್.ರಾಘವೇಂದ್ರ, ಡಾ. ಮಂಜು, ಪ್ರೋ. ಕುಮಾರಸ್ವಾಮಿ, ಡಾ.ಮಹಾಬಲೇಶ್ವರ ಹೆಗಡೆ, ವಿಜಯಾ ಹೆಗಡೆ, ವಿಶ್ವೇಶ್ವರ ಭಟ್ಟ, ಡಾ.ಸುಭಾಸಚಂದ್ರನ್, ಸಹಾಯಕಅರಣ್ಯಾಧಿಕಾರಿಚಾಲಚಂದ್ರ, ವಲಯಅರಣ್ಯಾಧಿಕಾರಿ ಶಂಕರಗೌಡ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಪೂರ್ವದಲ್ಲಿ ಶಿರಸಿ ಅರಣ್ಯಕಾಲೇಜು ವಿದ್ಯಾರ್ಥಿಗಳಿಗೆ ವಲಯಅರಣ್ಯಾಧಿಕಾರಿ ಶಂಕರಗೌಡಅವರು ಸಾಗರರಸ್ತೆಯ ಸಾಲು ಮರದತಿಮ್ಮಕ್ಕ ಉದ್ಯಾನವನದ ವಿವರಣೆ, ವಿಶೇಷತೆ ಕುರಿತಾಗಿ ವಿವರಿಸಿದರು.

ವೃಕ್ಷ ಲಕ್ಷ ಆಂದೋಲನದ ಪ್ರಮುಖ ಗಣಪತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಸ್ವಾಗತಿಸಿದರೆ, ಕೃಷಿಕ ಸಮಾಜದ ಜಿಲ್ಲಾ ಸಮಿತಿ ಸದಸ್ಯ ಕೇದಾರಕೊಲ್ಲೆ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X