ಐರೋಡಿ: ಬೆಂಕಿ ಹಚ್ಚಿಕೊಂಡು ಉಪನ್ಯಾಸಕಿ ಆತ್ಮಹತ್ಯೆ
ಕೋಟ, ಫೆ.18: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.17ರಂದು ರಾತ್ರಿ ವೇಳೆ ಐರೋಡಿ ಗ್ರಾಮದ ದಂಡೆಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಮಲ್ಪೆಯ ಪುರುಷೋತ್ತಮ ಎಂಬವರ ಪತ್ನಿ ಅಶ್ವಿನಿ (28) ಎಂದು ಗುರುತಿಸಲಾಗಿದೆ. ಮಣೂರು ಪಡುಕೆರೆಯ ಕಾಲೇಜ್ನಲ್ಲಿ ಉಪನ್ಯಾಸಕಿ ಯಾಗಿ ಕೆಲಸ ಮಾಡುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕಳೆದ ತಿಂಗಳು ಗಂಡನ ಮನೆಯಲ್ಲಿರುವಾಗ ಈಕೆ 2 ಬಾರಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಫೆ.17ರಂದು ಗಂಡನ ಮನೆಯಿಂದ ತವರು ಮನೆಯಾದ ಐರೋಡಿ ಗ್ರಾಮದ ದಂಡೆಬೆಟ್ಟುವಿಗೆ ಬಂದಿದ್ದ ಅಶ್ವಿನಿ, ಸಂಜೆ ವೇಳೆ ಸ್ನಾನಗೃಹದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ವೇಳೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.