ಗಾಂಜಾ ಸೇವನೆ: ಆರೋಪಿಗಳ ಬಂಧನ
ಮಂಗಳೂರು, ಫೆ.18: ಕಸಬಾ ಬೆಂಗರೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪದಲ್ಲಿ ಯುವಕರಿಬ್ಬರನ್ನು ಪಣಂಬೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಜಫೀರ್ (23), ಮುಹಮ್ಮದ್ ಹುಸೈನ್(30) ಬಂಧಿತ ಆರೋಪಿಗಳು.
ಕಸಬಾ ಬೆಂಗರೆ ಫೆರಿ ಮತ್ತು ಕಿಲೇರಿಯಾ ಬಳಿ ಗಾಂಜಾ ಅಮಲು ಪದಾರ್ಥವನ್ನು ಸೇವಿಸುತ್ತಿದ್ದ ಆರೋಪಿಗಳನ್ನು ಪಣಂಬೂರು ಪೊಲೀಸರು ದಾಳಿ ನಡೆಸಿ, ಬಂಧಿಸಿದರು. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್ಕುಮಾರ್ ಎಂ.ಎನ್. ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.
Next Story