‘ನಾನು ಯೋಧ, ಅವರು ಕ್ರಿಕೆಟಿಗ’: ಸಿಧು ಹೇಳಿಕೆಗೆ ಅಮರೀಂದರ್ ಪ್ರತಿಕ್ರಿಯೆ

ಹೊಸದಿಲ್ಲಿ, ಫೆ. 19: ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಕ್ಕು ಇದೆ. ಆದುದರಿಂದ ತಮ್ಮ ನಿಲುವನ್ನು ವ್ಯಕ್ತಪಡಿಸುವ ಹಕ್ಕು ಸಿಧು ಅವರಿಗೆ ಕೂಡ ಇದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಪುಲ್ವಾಮ ಭಯೋತ್ಪಾದಕ ದಾಳಿಯ ಕುರಿತು ಪಾಕಿಸ್ತಾನವನ್ನು ಸಮರ್ಥಿಸಿಕೊಂಡು ಸಂಪುಟ ಸಚಿವ ನವಜ್ಯೋತ್ ಸಿಂಗ್ ಸಿಧು ನೀಡಿದ ಹೇಳಿಕೆಯಿಂದ ಕೇಂದ್ರ ಸರಕಾರ ಹಾಗೂ ಕಾಂಗ್ರೆಸ್ ಅವಮಾನ ಉಂಟಾಗಿತ್ತು.
‘‘ಸಿಧು ಕ್ರಿಕೆಟಿಗ. ಆದರೆ, ನಾನು ಯೋಧ. ಇಬ್ಬರ ನಿಲುವು ವಿಭಿನ್ನ’’ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ಸಿಧುಗೆ ಸೇನೆಯ ಸಂಕೀರ್ಣತೆ ಅರ್ಧ ಆಗಲಾರದು. ಗೆಳೆತನದ ಹಿನ್ನೆಲೆಯಲ್ಲಿ ಅವರು ಆ ರೀತಿ ಹೇಳಿಕೆ ನೀಡಿರಬಹುದು. ಅವರ ಉದ್ದೇಶ ಖಂಡಿತವಾಗಿ ದೇಶ ವಿರೋಧಿ ಆಗಿರಲಾರದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
Next Story





