Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಬೋಟು ನಾಪತ್ತೆ ಪ್ರಕರಣ: ನೌಕಾಪಡೆಯಿಂದ...

'ಬೋಟು ನಾಪತ್ತೆ ಪ್ರಕರಣ: ನೌಕಾಪಡೆಯಿಂದ ಸತ್ಯ ಬಹಿರಂಗಗೊಳಿಸಿ'

ಮೀನುಗಾರರ ಜೊತೆ ಸಂವಾದದಲ್ಲಿ ಸತೀಶ್ ಕುಂದರ್ ಒತ್ತಾಯ

ವಾರ್ತಾಭಾರತಿವಾರ್ತಾಭಾರತಿ20 Feb 2019 5:29 PM IST
share
ಬೋಟು ನಾಪತ್ತೆ ಪ್ರಕರಣ: ನೌಕಾಪಡೆಯಿಂದ ಸತ್ಯ ಬಹಿರಂಗಗೊಳಿಸಿ

ಉಡುಪಿ, ಫೆ.20: ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ನಾಪತ್ತೆಯಾಗಿ 65 ದಿನಗಳಾದರೂ ಈವರೆಗೆ ಯಾವುದೇ ಕುರುಹುಗಳು ದೊರೆತಿಲ್ಲ. ನೌಕಾಪಡೆಯ ಐ-ಎಸ್‌ಎಸ್ ಕೊಚ್ಚಿ ಎಂಬ ಹಡಗು ಢಿಕ್ಕಿ ಹೊಡೆದು ಸುವರ್ಣ ತ್ರಿಭುಜ ಬೋಟು ಹಾನಿಯಾಗಿ ಮುಳುಗಿರುವುದು ನಮ್ಮ ಬಲವಾದ ಶಂಕೆ. ಆದರೆ ನೌಕಾಪಡೆ ನಮ್ಮಿಂದ ಎಲ್ಲವನ್ನು ಮುಚ್ಚಿಡುತ್ತಿದೆ. ಒಂದೆರೆಡರು ದಿನಗಳಲ್ಲಿ ನೌಕಪಡೆಯಿಂದ ನಮಗೆ ಸತ್ಯ ತಿಳಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ಶಾರದ ಇಂಟರ್ ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ‘ಭಾರತ್ ಕೀ ಮನ್ ಕೀ ಬಾತ್’ ಕರಾವಳಿಯ ಮೀನುಗಾರರ ಜೊತೆ ಸಂವಾದ ಹಾಗೂ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ನೌಕಾಪಡೆಯ ಐ-ಎಸ್‌ಎಸ್ ಕೊಚ್ಚಿ ಹಡಗಿನ ಅಡಿಭಾಗದಲ್ಲಿ ಆಗಿರುವ ಹಾನಿಯ ಹಿನ್ನೆಲೆಯಲ್ಲಿ ಸಮುದ್ರ ಆಳದಲ್ಲಿ ಸಟ್ಲೇಜ್ ಹಡಗಿನ ಮೂಲಕ ಹುಡುಕಾಟ ನಡೆಸಿದಾಗ 21.5 ಮೀಟರ್ ಉದ್ದದ ಬೋಟಿನ ರೆಕ್ಕೆಯ ಭಾಗವೊಂದು ಗೋಚರಿಸಿತ್ತು. ಆದರೆ ಇತ್ತೀಚೆಗೆ ಬಂದ ಮಾಹಿತಿಯಂತೆ ಆಳದಲ್ಲಿ ಕಂಡು ಬಂದಿರುವುದು ಬೋಟು ಅಲ್ಲ, ಕಲ್ಲುಬಂಡೆ ಎಂದು ಹೇಳ ಲಾಗಿತ್ತು. ಹಾಗಾದರೆ ಬಲಿಷ್ಠವಾದ ಐ-ಎಸ್‌ಎಸ್ ಕೊಚ್ಚಿ ಹಡಗಿಗೆ ಹಾನಿ ಯಾಗುವಂತೆ ಢಿಕ್ಕಿ ಹೊಡೆದಿರುವುದು ಏನು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದರು.

ನಾಪತ್ತೆಯಾದ ಮೀನುಗಾರರ ಮನೆಯವರು ಕಣ್ಣೇರಿನಲ್ಲಿಯೇ ದಿನ ಕಳೆಯು ತ್ತಿದ್ದಾರೆ. ಪ್ರತಿದಿನ ನಮ್ಮನ್ನು ಸಂಪರ್ಕಿಸಿ ಕೇಳುತ್ತಲೇ ಇದ್ದಾರೆ. ಕರಾವಳಿ ಯಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ. ಇನ್ನು ಯಾವುದಕ್ಕೂ ಕಾಯುವ ಪರಿಸ್ಥಿತಿ ಯಲ್ಲಿ ನಾವು ಇಲ್ಲ. ನೌಕಾಪಡೆಯ ಬೋಟಿಗೆ ಹಾನಿಯಾಗಿರುವುದು ಹೇಗೆ ಎಂಬುದಕ್ಕೆ ನಮಗೆ ಕೂಡಲೇ ಉತ್ತರಬೇಕು. ಫೆ.21ರಂದು ಬೆಂಗಳೂರಿಗೆ ಆಗಮಿಸುವ ರಕ್ಷಣಾ ಸಚಿವರಿಂದ ನಮಗೆ ಸತ್ಯ ತಿಳಿಸಬೇಕು ಎಂದು ಅವರು ತಿಳಿಸಿದರು.

ನಾಪತ್ತೆಯಾದ ಮೀನುಗಾರರ ಮನೆಯವರು ಕಣ್ಣೇರಿನಲ್ಲಿಯೇ ದಿನ ಕಳೆಯು ತ್ತಿದ್ದಾರೆ. ಪ್ರತಿದಿನ ನಮ್ಮನ್ನು ಸಂಪರ್ಕಿಸಿ ಕೇಳುತ್ತಲೇ ಇದ್ದಾರೆ. ಕರಾವಳಿಯಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ. ಇನ್ನು ಯಾವುದಕ್ಕೂ ಕಾಯುವ ಪರಿಸ್ಥಿತಿ ಯಲ್ಲಿ ನಾವು ಇಲ್ಲ. ನೌಕಾಪಡೆಯ ಬೋಟಿಗೆ ಹಾನಿಯಾಗಿರುವುದು ಹೇಗೆ ಎಂಬುದಕ್ಕೆ ನಮಗೆ ಕೂಡಲೇ ಉತ್ತರಬೇಕು. ಫೆ.21ರಂದು ಬೆಂಗಳೂರಿಗೆ ಆಗಮಿಸುವ ರಕ್ಷಣಾ ಸಚಿವರಿಂದ ನಮಗೆ ಸತ್ಯ ತಿಳಿಸಬೇಕು ಎಂದು ಅವರು ತಿಳಿಸಿದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನಾಪತ್ತೆಯಾದ ಬೋಟು ಹಾಗೂ ಮೀನುಗಾರರು ಎಲ್ಲಿದ್ದಾರೆ, ಅವರ ಸ್ಥಿತಿ ಏನು ಎಂಬುದು ಈವರೆಗೆ ಗೊತ್ತಾಗಿಲ್ಲ. ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವರು ಭೇಟಿ ಮಾಡಲಾಯಿತು. ನಿತಿನ್ ಗಡ್ಕರಿ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಯಿತು. ಆದರೂ ಈತನಕ ಸುವರ್ಣ ತ್ರಿಭುಜ ಬೋಟು ಪತ್ತೆ ಮಾಡಲು ಆಗಿಲ್ಲ. 68 ದಿನಗಳಾದರೂ ಯಾವುದೇ ಕುರುಹು ಪತ್ತೆಯಾಗದಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಮಾತನಾಡಿ, ಸರಕಾರ ಬೋಟು ಸಹಿತ ಮೀನುಗಾರರನ್ನು ಹುಡುಕುವ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ನಿಮಗೆ ಯಾವುದಾದರೂ ಮಾಹಿತಿ ಇದ್ದರೆ ನಮಗೆ ತಿಳಿಸಿ, ಅವರು ಎಲ್ಲೇ ಇದ್ದರೂ ನಾವು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಶೋಭೇಂದ್ರ ಸಸಿಹಿತ್ಲು, ಮಹೇಶ್ ಠಾಕೂರು ಮೊದಲಾದವರು ಉಪಸ್ಥಿತರಿದ್ದರು. ಯಶ್ ಪಾಲ್ ಸುವರ್ಣ ಸ್ವಾಗತಿಸಿದರು. ಕುತ್ಯಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೋಸ್ಟಲ್ ಗಾರ್ಡ್‌ನಲ್ಲಿ ಮೀನುಗಾರರಿಗೆ ಉದ್ಯೋಗ ನೀಡಿ

ಮಲ್ಪೆಯಲ್ಲಿರುವ ಕೋಸ್ಟಲ್ ಗಾರ್ಡ್‌ನಿಂದ ಮೀನುಗಾರರಿಗೆ ಯಾವುದೇ ಪ್ರಯೋಜನ ಇಲ್ಲ. ಅಪಾಯದಲ್ಲಿ ಸಿಲುಕಿರುವ ಬೋಟುಗಳ ರಕ್ಷಣೆ ಕೂಡ ಇವರಿಂದ ಆಗುತ್ತಿಲ್ಲ. ಇಲ್ಲಿ ಯಾವುದೇ ಈಜುಪಟುಗಳಿಲ್ಲ. ಆದುದರಿಂದ ಈಜುಪಟುಗಳಾದ ಮೀನುಗಾರರಿಗೆ ಇದರಲ್ಲಿ ಉದ್ಯೋಗ ಕೊಡುವ ಕೆಲಸ ಆಗಬೇಕು ಎಂದು ಸತೀಶ್ ಕುಂದರ್ ಒತ್ತಾಯಿಸಿದರು.

ಕೃಷಿಗೆ ಸಿಗುವ ಎಲ್ಲ ಸವಲತ್ತುಗಳು ಮೀನುಗಾರರಿಗೆ ಸಿಗಬೇಕು. ಡಿಸೇಲ್ ಬಗ್ಗೆ ಇರುವ ರೋಡ್ ಸೆಸ್ ರದ್ದುಗೊಳಿಸಬೇಕು. ಸೀಮೆಎಣ್ಣೆಗೆ ಸಬ್ಸಿಡಿ ನೀಡ ಬೇಕು. ಮೀನುಗಾರಿಕೆಗೆ ಸಂಬಂಧಿಸಿ ಕರಾವಳಿ ರಾಜ್ಯಗಳಲ್ಲಿ ಏಕರೂಪದ ಕಾನೂನು ಜಾರಿಗೆ ತರಬೇಕು ಎಂದು ಮೀನುಗಾರ ಮುಖಂಡರು ಒತ್ತಾಯಿಸಿ ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X