ಮ್ಯೂನಿಕ್ನಲ್ಲಿ ಗುಂಡು ಹಾರಾಟ; 2 ಸಾವು
ಭಯೋತ್ಪಾದಕ ಘಟನೆಯಲ್ಲ: ಪೊಲೀಸ್
ಮ್ಯೂನಿಕ್ (ಜರ್ಮನಿ), ಫೆ. 21: ದಕ್ಷಿಣ ಜರ್ಮನಿಯ ಮ್ಯೂನಿಕ್ ನಗರದಲ್ಲಿ ಗುರುವಾರ ಇಬ್ಬರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ, ಆದರೆ ಅದು ಭಯೋತ್ಪಾದಕ ದಾಳಿ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಒಬ್ಬಾತ ಗುಂಡು ಹಾರಿಸಿದ್ದನು ಎಂದು ಪೊಲೀಸ್ ವಕ್ತಾರರು ಹೇಳಿದರು. ಘಟನೆಯಲ್ಲಿ ಬೇರೆ ಯಾರೂ ಗಾಯಗೊಂಡಂತೆ ಕಂಡುಬಂದಿಲ್ಲ ಎಂದು ಅವರು ನುಡಿದರು.
‘‘ಅಲ್ಲಿನ ಜನರಿಗೆ ಯಾವುದೇ ಅಪಾಯವಿಲ್ಲ’’ ಎಂದರು.
ಗುರುವಾರ ಬೆಳಗ್ಗೆ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಗುಂಡು ಹಾರಾಟ ನಡೆಯುತ್ತಿದ್ದ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
Next Story