ನೋಡುಗರ ಕಣ್ಮನ ಸೆಳೆದ ಲೋಹದ ಹಕ್ಕಿಗಳ ಕಲರವ
ಶುಕ್ರವಾರ ಬೆಂಗಳೂರಿನ ಯಲಹಂಕದ ವೈಮಾನಿಕ ವಾಯುನೆಲೆಯಲ್ಲಿ ನಡೆದ 12ನೇ ಏರ್ ಶೋ ನೋಡುಗರನ್ನು ಮಂತ್ರಮುಗ್ದಗೊಳಸಿತು. ಸುಮಾರು ಹತ್ತಕ್ಕೂ ಹೆಚ್ಚು ದೇಶಗಳ ಯುದ್ದ ವಿಮಾನಗಳು ಹಾರಾಟ ನಡೆಸಿದ್ದು, ಅದೇ ರೀತಿ, ದೇಶಿಯ ತೇಜಸ್, ರಫೇಲ್, ಎಫ್ 16 ಸೇರಿದಂತೆ ಹಲವು ಯುದ್ದ ವಿಮಾನಗಳು ಹಾರಾಟ ನಡೆಸಿದವು. ಯುದ್ಧ ವಿಮಾನಗಳ ಹಾರಾಟದ ಜತೆಗೆ, ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಪ್ರಾತ್ಯಕ್ಷಿಕೆ ವಿಶೇಷವಾಗಿತ್ತು. ಭಾರತೀಯ ಯೋಧರು ಮತ್ತು ವಾಯು ಸೇನಾಧಿಕಾರಿಗಳು, ಭಯೋತ್ಪದಕರಿಗೆ ಸಂಹಾರ ಮಾಡಿ ಪಾಕ್‌ಗೆ ಮರ್ಮಾಘಾತ ನೀಡಿದ ಸರ್ಜಿಕಲ್ ಸ್ಟ್ರೈಕ್ ದಾಳಿಯ ಅಣುಕು ಪ್ರದರ್ಶಿಸಲಾಯಿತು.
Next Story





