ಅಸ್ಸಾಂ ರೈಫಲ್ಸ್ಗೆ ವಿಶೇಷಾಧಿಕಾರ: ಅಧಿಸೂಚನೆ ಹಿಂದೆಗೆದ ಕೇಂದ್ರ ಸರಕಾರ
ಹೊಸದಿಲ್ಲಿ, ಫೆ. 22: ಸೇನಾ ಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ಪಿಎ) ಅನ್ವಯವಾಗದ ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್ಗೆ ವಾರಂಟ್ ಇಲ್ಲದೆ ಶೋಧಿಸಲು ಹಾಗೂ ವಶಕ್ಕೆ ತೆಗೆದುಕೊಳ್ಳಲು ಅಧಿಕಾರ ನೀಡಿ ವಿಧಿಸಿದ ಅಧಿಸೂಚನೆಯನ್ನು ಕೇಂದ್ರ ಸರಕಾರ ಶುಕ್ರವಾರ ಹಿಂದೆ ತೆಗೆದುಕೊಂಡಿದೆ.
ಗೃಹ ಸಚಿವಾಲಯ ಅಧಿಸೂಚನೆಯನ್ನು ರದ್ದುಗೊಳಿಸಿದೆ. ಈ ಅಧಿಸೂಚನೆ ಬಗ್ಗೆ ಪರಿಶೀಲಿಸಿ ಹಾಗೂ ಸಂಬಂಧಿತ ರಾಜ್ಯ ಸರಕಾರದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
Next Story