ಅಂಚೆ ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ಸರಕಾರ ಒದಗಿಸಲಿ: ಪಲಿಮಾರು ಶ್ರೀ
ಅಂಚೆ ನೌಕರರ 11ನೇ ಫೆಡರಲ್ ಕಾಂಗ್ರೆಸ್ ಉದ್ಘಾಟನೆ

ಉಡುಪಿ, ಫೆ.24: ಅಂಚೆ ನೌಕರರ ಸೇವೆ ಅಗಾಧವಾದುದು. ಆದುದರಿಂದ ಅವರು ಮುಷ್ಕರ ನಡೆಸಿ ಸೌಲಭ್ಯ ಪಡೆಯುವಂತಹ ಪರಿಸ್ಥಿತಿ ಬರಬಾರದು. ಸರಕಾರ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ವಿಭಾಗೀಯ ಅಂಚೆ ನೌಕರರ ಸಂಘಗಳ ಆಶ್ರಯದಲ್ಲಿ ಉಡುಪಿ ಹೊಟೇಲ್ ಮಥುರಾ ಕಂಫರ್ಟ್‌ನ ಜಯಕೃಷ್ಣ ಸಭಾಭವನದಲ್ಲಿ ಆಯೋಜಿಸ ಲಾದ ಎರಡು ದಿನಗಳ ರಾಷ್ಟ್ರೀಯ ಅಂಚೆ ನೌಕರರ ಸಂಘಟನೆಗಳ ಒಕ್ಕೂಟದ 11ನೆ ಫೆಡರಲ್ ಕಾಂಗ್ರೆಸ್‌ನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಎನ್.ಕೆ.ತ್ಯಾಗಿ ವಹಿಸಿ ದ್ದರು. ಹೊಸದಿಲ್ಲಿ ಅಂಚೆ ಸೇವಾ ಮಂಡಳಿಯ ಸದಸ್ಯೆ ಅರುಂದತಿ ಘೋಷ್, ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ, ಹಿರಿಯ ಅಧಿಕಾರಿ ಎಸ್.ರಾಜೇಂದ್ರಕುಮಾರ್, ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಪಿಎನ್‌ಪಿಓನ ಪ್ರಧಾನ ಕಾರ್ಯದರ್ಶಿ ಟಿ.ಎನ್.ರಾಹತೆ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ತ್ಯಾಗರಾಜನ್, ಡಿ.ಕಿಶನ್ ರಾವ್, ರಾಷ್ಟ್ರೀಯ ಅಂಚೆ ನೌಕರರ ಸಿ ಗ್ರೂಪ್ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾಜಿ ವಾಸಿ ರೆಡ್ಡಿ, ರಾಷ್ಟ್ರೀಯ ಗ್ರಾಮೀಣ ಡಾಕ್ ಸೇವಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಯು.ಮುರಳೀಧರನ್, ಮುಖಂಡರಾದ ಪಿ.ಡಿ.ಬಾವಿಕರ್, ರಾಕೇಶ್ ಭಟಿಯಾ, ಕೆ.ಶಿವದಾಸನ್, ಆರ್.ಮಹಾದೇವ ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಎನ್‌ಯುಪಿಇ ಗ್ರೂಪ್ ‘ಸಿ’ ಯ ವೃತ್ತ ಕಾರ್ಯದರ್ಶಿ ಬಿ.ಶಿವಕುಮಾರ್ ಸ್ವಾಗತಿಸಿದರು. ವಿಜಯ ಶೆಣೈ ಹಾಗೂ ಪ್ರವೀಣ್ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು.







