ವಿಜಯಾ ಬ್ಯಾಂಕ್ ವಿಲೀನ ವಿರುದ್ಧದ ಹೋರಾಟಕ್ಕೆ ಬೆಂಬಲ
ಮಂಗಳೂರು, ಫೆ.24:ಕೇಂದ್ರ ಸರಕಾರವು ವಿಜಯಾ ಬ್ಯಾಂಕು ಮತ್ತು ದೇನಾ ಬ್ಯಾಂಕನ್ನು, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಯಾವುದೇ ಸಂಘಟನೆ ಅಥವಾ ಪಕ್ಷಗಳು ನಡೆಸುವ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದು ದ.ಕ.ಜಿಲ್ಲಾ ಸಿಪಿಐ ಕಾರ್ಯದರ್ಶಿ ವಿ.ಕುಕ್ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೆ ಸಿಪಿಐ ಸಮಾನ ಮನಸ್ಕರೊಡಗೂಡಿ ಅನೇಕ ಹೋರಾಟಗಳನ್ನು ನಡೆಸಿದೆ.ಮುಂದೆ ನಡೆಯುವ ಹೋರಾಟದಲ್ಲೂ ಭಾಗಿಯಾಗಲಿದೆ. ಆ ಮೂಲಕ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕನ್ನು ಉಳಿಸಲು ಪಣ ತೊಡಲಿದೆ ಎಂದು ತಿಳಿಸಿದ್ದಾರೆ.
Next Story





