ಮಾ. 2ರಂದು "ಆವಿಷ್ಕಾರ" ಉಚಿತ ತರಬೇತಿ ಕಾರ್ಯಗಾರ
ಬಂಟ್ವಾಳ, ಫೆ. 24: ಸರಕಾರಿ ಪದವಿ ಕಾಲೇಜು ಹಾಗೂ ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಕೆವಿಸಿ ಅಕಾಡಮಿ ಮಂಗಳೂರು ಸಹಯೋಗದಲ್ಲಿ ಮಾ. 2ರಂದು ಆವಿಷ್ಕಾರ ಎಂಬ ಉಚಿತ ತರಬೇತಿ ಕಾರ್ಯಗಾರ ನಡೆಯಲಿದೆ.
ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಂಟ್ವಾಳದ ರೋಟರಿ ಕ್ಲಬ್ ಹಾಲ್‍ನಲ್ಲಿ ನಡೆಯಲಿರುವ ತರಬೇತಿಯಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸಿಎ ಹಾಗೂ ಇನ್ನಿತರ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ, ಚಟುವಟಿಕೆ ಆಧಾರಿತ ತರಬೇತಿ ಯನ್ನು ನುರಿತ ತರಬೇತುದಾರರ ತಂಡ ನೀಡಲಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಆಯ್ಕೆಗಳು ಹಾಗೂ ಅವಕಾಶಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





