ಬಂಟ್ವಾಳ: ಪಿಎಫ್ಐ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ, ಫೆ. 24: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ವಲಯ ವತಿಯಿಂದ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಬಂಟ್ವಾಳ ಕೆಳಗಿನ ಪೇಟೆಯ ಮನಾರುಲ್ ಇಸ್ಲಾಮಿಯ ಶಾಲಾ ಕಟ್ಟಡದಲ್ಲಿ ರವಿವಾರ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬಂಟ್ವಾಳ ವಲಯಾಧ್ಯಕ್ಷ ಅಬೂಬಕರ್ ಮದ್ದ ವಹಿಸಿದ್ದರು. ಸಾರ್ವಜನಿಕರ ಉತ್ತಮ ಸ್ಪಂದನೆಯೊಂದಿಗೆ ಸುಮಾರು 95 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಮಹಿಳಾ ರಕ್ತದಾನಿಗಳು ಹೆಚ್ಚಾಗಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.
ಮಖ್ಯ ಅಥಿತಿಗಳಾಗಿ ಬಂಟ್ವಾಳ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸುರೇಂದ್ರ ನಾಥ್ ನಾಯಕ್, ಹಿರಿಯ ನಾಯಕರಾದ ಹಾಜಿ ಬಿ ಎಚ್ ಖಾದರ್, ಬಂಟ್ವಾಳ ಮಸೀದಿ ಅಧ್ಯಕ್ಷ ಹೈದರ್ ಅಲಿ, ಪುರಸಭಾ ಸದಸ್ಯರಾದ ಮುನೀಶ್ ಅಲಿ, ತೌಹೀದ್ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕರಾದ ಸಗೀರ್ ಅಹ್ಮದ್, ನಿವೃತ್ತ ಮುಖ್ಯೊಪಾದ್ಯಾಯ ರಾದ ಅಬ್ದುಲ್ ಸಲಾಂ ಮಾಸ್ಟರ್, ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಮತ್ತು ಫಾದರ್ ಮುಲ್ಲರ್ ಅಸ್ಪತ್ರೆ ಸಿಬ್ಬಂದಿ ಡಾ. ಕ್ರಿಸ್ಟಿನಾ ಮುಂತಾದವರು ಭಾಗವಹಿಸಿದ್ದರು.












