ಒತ್ತುವರಿ ಆಗಿರುವ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರ ನಿಗಾ ವಹಿಸಬೇಕು: ಹೈಕೋರ್ಟ್ ಮೌಖಿಕ ತಾಕೀತು

ಬೆಂಗಳೂರು, ಫೆ.24: ರಾಜ್ಯದಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರ ನಿಗಾ ವಹಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮೌಖಿಕವಾಗಿ ತಾಕೀತು ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗದ್ದೆಮನೆ ಗ್ರಾಮದ ಗೋಪಾಲ ಬಿನ್ ರಾಮಪ್ಪ ಮತ್ತು ರಾಜ್ಯ ಸರಕಾರದ ನಡುವಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ಎಲ್. ನಾರಾಯಣ ಸ್ವಾಮಿ ಅವರು, ಅಕ್ರಮ ಅರಣ್ಯ ವಾಸಿಗಳ ತೆರವಿಗೆ ಸುಪ್ರೀಂಕೋರ್ಟ್ ನಿನ್ನೆಯಷ್ಟೇ ಖಡಕ್ ನಿರ್ದೇಶನ ನೀಡಿದೆಯಲ್ಲಾ ಎಂದು ರಾಜ್ಯ ಸರಕಾರದ ಪರ ವಕೀಲರನ್ನು ಎಚ್ಚರಿಸಿದರು.
ಅರಣ್ಯ ಪ್ರದೇಶಗಳಲ್ಲಿ ಬುಡಕಟ್ಟು ನಿವಾಸಿಗಳಿದ್ದರೂ ಅವರನ್ನು ತೆರವುಗೊಳಿಸುವ ನಿರ್ದೇಶನ ಇರುವಾಗ ಇವರೆಲ್ಲರೂ ಅರಣ್ಯ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.
Next Story





