ದುಬೈಗೆ ತೆರಳುತ್ತಿದ್ದ ವಿಮಾನ ಹೈಜಾಕ್ ಗೆ ಯತ್ನ: ತುರ್ತು ಭೂಸ್ಪರ್ಶ

ಢಾಕಾ, ಫೆ.24: ಚಿತ್ತಗಾಂಗ್ ನಿಂದ ದುಬೈಗೆ ತೆರಳುತ್ತಿದ್ದ ವಿಮಾನದ ಹೈಜಾಕ್ ಗೆ ಯತ್ನಿಸಲಾಗಿದ್ದು, ವಿಮಾನ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ 142 ಪ್ರಯಾಣಿಕರು ಸುರಕ್ಷಿತವಾಗಿ ಹೊರಹೋಗಿದ್ದಾರೆ. ಪೊಲೀಸರು ಮತ್ತು ಸೇನೆ ವಿಮಾನವನ್ನು ಸುತ್ತುವರಿದು ಪರಿಶೀಲಿಸುತ್ತಿದೆ. ವ್ಯಕ್ತಿಯೊಬ್ಬ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ್ದ ಎಂದು ವರದಿಯಾಗಿದೆ.
Next Story