ರೆಡ್‌ಕ್ರಾಸ್ ಚುನಾವಣೆ: ಶೇ. 42 ಮತದಾನ

ಮಂಗಳೂರು, ಫೆ. 24: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮಂಗಳೂರು ಇದರ ಆಡಳಿತ ಮಂಡಳಿಯ ಚುನಾವಣೆ ರವಿವಾರ ನಡೆಯಿತು.
ಆಡಳಿತ ಮಂಡಳಿಯ 10 ಸ್ಥಾನಗಳಿಗೆ 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆ 1993 ಆಗಿದ್ದು, ಈ ಪೈಕಿ 846 ಮಂದಿ ಮತ ಚಲಾಯಿಸಿದ್ದು, ಶೇ. 42.45 ಮತದಾನ ಆಗಿದೆ.
ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಫೆ.25 ರಂದು ಪೂರ್ವಾಹ್ನ 9 ಗಂಟೆಗೆ ರೆಡ್‌ಕ್ರಾಸ್ ಕಚೇರಿಯಲ್ಲಿ ಮತ ಎಣಿಕೆ ಆರಂಭವಾಗಲಿದೆ.

Next Story





