ಬಿಜೆಪಿ ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ: ಗುಂಡೂರಾವ್

ಬೈಂದೂರು, ಫೆ.24: ಚುನಾವಣಾ ಪೂರ್ವದಲ್ಲಿ ಬಿಜೆಪಿ ಕೊಟ್ಟ ಭರವಸೆ ಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಉದ್ಯೋಗ ಸೃಷ್ಠಿಯನ್ನು ಮಾಡಿಲ್ಲ. ಸುಳ್ಳು ಅಂಕಿಅಂಶಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕಟುವಾಗಿ ಟೀಕಿಸಿದ್ದಾರೆ.
ಬಗ್ವಾಡಿ ಎನ್‌ಟಿಎಸ್ ಸಾಗರ್ ಪ್ಯಾಲೇಸ್‌ನಲ್ಲಿ ರವಿವಾರ ನಡೆದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಅವರ ಪ್ರದಪ್ರಧಾನ ಸಮಾರಂಭ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯ ಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ಅತೀವ ನಂಬಿಕೆ ಇದೆ. ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಕನಸು ಕಾಣುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಭಾವನಾತ್ಮಕ ವಿಚಾರಗಳನ್ನು, ಹಸಿಸುಳ್ಳುಗಳನ್ನು ಜನತೆಯ ಮುಂದಿಟ್ಟು ಚುನಾ ವಣೆಯನ್ನು ಎದುರಿಸಿತು ಎಂದು ಅವರು ದೂರಿದರು.
ಬಿಜೆಪಿಗೆ ಅಧಿಕಾರ ಕೊಟ್ಟರೆ ಅಚ್ಚೇ ದಿನ್ ತರುವುದಾಗಿ ಮೋದಿ ಚುನಾ ವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿದ್ದರು. ಇಂದು ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಬಂದರೆ ಅಚ್ಛೇ ದಿನ್ ಬಗ್ಗೆ ಮಾತನಾಡಲ್ಲ. ಅವರು ಅಚ್ಛೇ ದಿನ್ ಮರೆತೇ ಬಿಟ್ಟಿದ್ದಾರೆ. ಮೋದಿಯ ಅಚ್ಛೇ ದಿನ್ ಇಂದು ಮಾಯವಾಗಿದೆ. ಮೋದಿ ಮಾತಿನ ಮಾಯಲೋಕವನ್ನೇ ಸೃಷ್ಠಿ ಮಾಡಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಅವರು ಆರೋಪಿಸಿದರು.
ಐಸಿಸ್‌ನವರು ನಮ್ಮ ದೇಶಕ್ಕೆ ಬರಲು ಅನುವು ಮಾಡಿಕೊಡುವ ಮೋದಿ ಸರಕಾರ, ಕಾಂಗ್ರೆಸ್‌ಗೆ ದೇಶಪ್ರೇಮದ ಮಾಠ ಮಾಡುತ್ತಿದೆ. ದೇಶಪ್ರೇಮ ಬಿಜೆಪಿಯ ಆಸ್ತಿಯಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ನಮ್ಮದು ಎಂದು ಅವರು ತಿಳಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಜಿ.ಎ.ಬಾವಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ನೂತನ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು.
ಮುಖ್ಯತಿಥಿಗಳಾಗಿ ಮುಖಂಡರಾದ ಎಂ.ಎಸ್ ಮೊಹಮ್ಮದ್, ಶಿವರಾಮ ಶೆಟ್ಟಿ ಮಲ್ಯಾಡಿ, ಮುರುಳಿ ಶೆಟ್ಟಿ, ಎಂ.ಎ.ಗಫೂರ್, ಗೀತಾ ವಾಗ್ಲೆ, ಶೇಖರ್ ಪೂಜಾರಿ, ರಾಜು ಪೂಜಾರಿ, ಮದನ್ ಕುಮಾರ್ ಬೈಂದೂರು, ಮಂಜಯ್ಯ ಶೆಟ್ಟಿ ಆಲೂರು, ರಘುರಾಮ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ನವೀನ್ ಡಿಸೋಜ, ವಿನಯರಾಜ್ ಉಪಸ್ಥಿತರಿದ್ದರು. ಸಂಪಿ ಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿದರು. ಶರತ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







