ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕೆ.ಪಿ.ಅಬ್ದುಲ್ ರಹ್ಮಾನ್

ಮಂಗಳೂರು, ಫೆ.24: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ಅಬ್ದುಲ್ ರಹ್ಮಾನ್ ದೇರಳಕಟ್ಟೆ ನೇಮಕಗೊಂಡಿದ್ದಾರೆ.
ನಗರದಲ್ಲಿ ರವಿವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಹಾಜಿ ಶರೀಫ್ ಜೊಕಟ್ಟೆ, ರಶೀದ್ ಹಾಜಿ ಪರ್ಲಡ್ಕ, ಶೌಕತ್ ಬೆಳ್ತಂಗಡಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಯು. ಇಸ್ಮಾಯೀಲ್ ಬಿ.ಸಿ.ರೋಡ್ ಮತ್ತು ಬಶೀರ್ ಉಳ್ಳಾಲ, ಕೋಶಾಧಿಕಾರಿಯಾಗಿ ಕತಾರ್ ಇಬ್ರಾಹೀಂ ಹಾಜಿ ಮಂಡೆಕೋಲು, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್, ಅಬ್ದುಲ್ ಸಮದ್ ಸಾಲೆತ್ತೂರ್, ಎ.ಎಸ್. ಶರೀಫ್ ಬಿ.ಸಿ.ರೋಡ್, ಅಬ್ದುಲ್ ಲತೀಫ್ ಕರಾಯ, ಆರಿಫ್ ಬಡಕಬೈಲ್, ಮುಹಮ್ಮದ್ ಎಂ. ಮಂಗಳೂರು, ಹಸನ್ ಕುಟ್ಟಿ ವೇಣೂರ್ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಯಾಗಿ ಹೈದರ್ ಕಳಂಜ, ಅಬ್ದುಲ್ ಖಾದರ್ ಕನ್ನೂರ್, ರಿಯಾಝುಧ್ದೀನ್ ಮಂಗಳೂರು, ಬಶೀರ್ ವಿಟ್ಲ, ಮುನೀರ್ ಎ.ಎಸ್. ಆತೂರ್, ಬಶೀರ್ ವಹಾಬಿ ಪುತ್ತೂರು, ಜಮಾಲ್ ಉಳ್ಳಾಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯೀಲ್ ಬಿ.ಸಿ.ರೋಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





