ಜಾರ್ಖಂಡ್‌ಗೆ ಹ್ಯಾಟ್ರಿಕ್ ಜಯ
ಮುಲಪಡು, ಫೆ.24: ನಾಯಕ ಇಶಾನ್ ಕಿಶನ್ ಸತತ ಎರಡನೇ ಶತಕ(ಔಟಾಗದೆ 113)ಗಳಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮಣಿಪುರ ವಿರುದ್ಧ ರವಿವಾರ ಭರ್ಜರಿ ಜಯ ದಾಖಲಿಸಿದೆ.
ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕಿಶನ್(113,62 ಎಸೆತ, 12 ಬೌಂಡರಿ, 5 ಸಿಕ್ಸರ್) ಹಾಗೂ ವಿರಾಟ್ ಸಿಂಗ್(ಔಟಾಗದೆ 73,46 ಎಸೆತ, 7 ಬೌಂಡರಿ, 3 ಸಿಕ್ಸರ್)ಎರಡನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 165 ರನ್ ಗಳಿಸಿ ಜಾರ್ಖಂಡ್ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 219 ರನ್ ಗಳಿಸಲು ನೆರವಾದರು. ಟೂರ್ನಿಯಲ್ಲಿ ಸತತ 3ನೇ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಗೆಲ್ಲಲು 220 ರನ್ ಬೆನ್ನಟ್ಟಿದ ಮಣಿಪುರ 20 ಓವರ್‌ಗಳಲ್ಲಿ 98 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಣಿಪುರ ಪರ ಯಶ್ಪಾಲ್ ಸಿಂಗ್(40)ಏಕಾಂಗಿ ಹೋರಾಟ ನೀಡಿದರು. ಜಾರ್ಖಂಡ್ ಪರ ಉತ್ಕರ್ಷ್ ಸಿಂಗ್(3-7),ರಾಹುಲ್ ಶುಕ್ಲಾ(3-14) ಹಾಗೂ ಎಡಗೈ ಸ್ಪಿನ್ನರ್ ಅನುಕೂಲ್ ರಾಯ್ (2-17)8 ವಿಕೆಟ್ ಹಂಚಿಕೊಂಡರು.
Next Story





