ಬಾಪೆ ಅವಳಿ ಗೋಲು: ಪಿಎಸ್‌ಜಿಗೆ ಜಯದ ಸವಿ
ಪ್ಯಾರಿಸ್, ಫೆ.24: ಕೈಲಿಯಾನ್ ಬಾಪೆ ಗಳಿಸಿದ ಅವಳಿ ಗೋಲುಗಳ ಬಲದಿಂದ ಪ್ಯಾರಿಸ್ ಸೈಂಟ್-ಜರ್ಮೈನ್(ಪಿಎಸ್‌ಜಿ) ತಂಡ ನೈಮ್ಸ್ ತಂಡದ ವಿರುದ್ಧ 3-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಲೀಗ್ 1(ಫ್ರೆಂಚ್ ಟ್ರೋಫಿ)ನಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಶನಿವಾರ ನಡೆದ ಪಂದ್ಯದ ಗೆಲುವಿನ ಮೂಲಕ 17 ಅಂಕಗಳನ್ನು ಹೆಚ್ಚಿಸಿಕೊಂಡ ಪಿಎಸ್‌ಜಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನವಾಯಿತು.
ಪಂದ್ಯದ 69 ಹಾಗೂ 89ನೇ ನಿಮಿಷಗಳಲ್ಲಿ ಬಾಪೆ ಸೊಗಸಾದ ಗೋಲುಗಳನ್ನು ಗಳಿಸಿದರು. ಆ ಮೂಲಕ ಲಿಲ್ಲೆ ತಂಡಕ್ಕಿಂತ ಅಧಿಕ ಸಂಪಾದಿಸಿದ ಪಿಎಸ್‌ಜಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಪಿಎಸ್‌ಜಿಗೆ ಕ್ರಿಸ್ಟೋಫರ್ ಕುಂಕು 40ನೇ ನಿಮಿಷದಲ್ಲಿ ಗೋಲು ತಂದರು.
ಎಡಿಸನ್ ಕವಾನಿ ಹಾಗೂ ನೇಮರ್ ಅವರ ಅನುಪಸ್ಥಿತಿಯ ನಡುವೆಯೂ ಪಿಎಸ್‌ಜಿ ಉತ್ತಮ ಪ್ರದರ್ಶನ ನೀಡುತ್ತಿದೆ.
Next Story





