ಫೆ.28ರಿಂದ ರಾಜ್ಯಮಟ್ಟದ ಆಕೃತಿ ತಾಂತ್ರಿಕ, ಸಾಂಸ್ಕೃತಿಕ ಉತ್ಸವ

ಮಂಗಳೂರು, ಫೆ. 25: ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.28ರಿಂದ ಮಾರ್ಚ್ 2ರವರೆಗೆ ರಾಜ್ಯಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ ಜರುಗಲಿದೆ.
ಫೆ.28ರಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯುವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಇನ್ಫೋಸಿಸ್ ಫಿನಾಕಲ್‌ನ ಗ್ಲೋಬಲ್ ಸೇಲ್ಸ್ ಹೆಡ್ ಹಾಗೂ ಹಿರಿಯ ಉಪಾಧ್ಯಕ್ಷ ವೆಂಕಟರಮಣ ಗೊಸಾವಿ ಅವರು ಆಕೃತಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯದ ವಿವಿಧೆಡೆಯಿಂದ ಯುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವ ಈ ಉತ್ಸವದಲ್ಲಿ 40ಕ್ಕೂ ಅಧಿಕ ಸ್ಪರ್ಧಾ ಕಾರ್ಯಕ್ರಮಗಳಿದ್ದು, 6 ಮೇಘಾ ಇವೆಂಟ್‌ಗಳು, 18 ಸಾಂಸ್ಕೃತಿಕ, 13 ತಾಂತ್ರಿಕ ಹಾಗೂ 9 ಕ್ರೀಡಾ ಸ್ಪರ್ಧೆಗಳಿವೆ. ಎರಡು ಲಕ್ಷದಷ್ಟು ಮೊತ್ತದ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಫುಡ್‌ಸ್ಟಾಲ್, ಫ್ಲೀ ಮಾರ್ಕೆಟ್ ಸೇರಿದಂತೆ ಈ ಉತ್ಸವ ವಿವಿಧ ಆಕರ್ಷಣೆಗಳಿಂದ ಕೂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





