ವಾರಣಾಸಿ:ವಿದ್ಯಾರ್ಥಿ ನಾಯಕನ ಹತ್ಯೆ

ವಾರಣಾಸಿ,ಫೆ.25: ಇಲ್ಲಿಯ ಉದಯ ಪ್ರತಾಪ್ ಕಾಲೇಜಿನ ವಿದ್ಯಾರ್ಥಿ ನಾಯಕನನ್ನು ರವಿವಾರ ರಾತ್ರಿ ಆತನ ಹಾಸ್ಟೆಲ್ ನೆದುರೇ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಅಝಂಗಡ ಜಿಲ್ಲೆಯ ನಿವಾಸಿ,ದ್ವಿತೀಯ ಬಿಕಾಂ ವಿದ್ಯಾರ್ಥಿ ವಿವೇಕ ಸಿಂಗ್(22) ಕೊಲೆಯಾಗಿರುವ ವಿದ್ಯಾರ್ಥಿ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ದಾರಿಹೋಕನೋರ್ವ ಇತರ ವಿದ್ಯಾರ್ಥಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ. ಸಮೀಪದ ಆಸ್ಪತೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಮೃತನ ಶರೀರದಲ್ಲಿ ಪಾಯಿಂಟ್ 32 ಬೋರ್ ಪಿಸ್ತೂಲಿನಿಂದ ಹಾರಿಸಲಾಗಿದ್ದ ಎಂಟು ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಹಂತಕರ ಪತ್ತೆಗಾಗಿ ಏಳು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
Next Story





