ಈ ವರ್ಷ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆ: ಸ್ಕೈಮೆಟ್

ಹೊಸದಿಲ್ಲಿ,ಫೆ.25: ಈ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದ್ದು,ಇದು ದೇಶದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಮತ್ತು ಆರ್ಥಿಕ ಬೆಳವಣಿಗೆಯ ಭರವಸೆಯನ್ನ್ನು ಹೆಚ್ಚಿಸಿದೆ.
ಭಾರತದಲ್ಲಿ ಸಾಮಾನ್ಯ ಮಳೆಯಾಗುವ ಶೇ.50ಕ್ಕೂ ಅಧಿಕ ಅವಕಾಶವಿದ್ದು, ಅತಿವೃಷ್ಟಿಯ ಸಾಧ್ಯತೆಗಳು ತುಂಬ ಕಡಿಮೆಯಿವೆ ಎಂದು ಸ್ಕೈಮೆಟ್ ನ ಸಿಇಒ ಜತಿನ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಕಳೆದ 50 ವರ್ಷಗಳ ಸರಾಸರಿ ಮಳೆಯ ಪ್ರಮಾಣವಾಗಿರುವ 89 ಸೆ.ಮೀ.ನ ಶೇ. 95ರಿಂದ ಶೇ.104ರಷ್ಟು ಮಳೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗಿದೆ.
ದೇಶವು ತನ್ನ ವಾರ್ಷಿಕ ಮಳೆಯ ಶೇ.70ರಷ್ಟನ್ನು ಮುಂಗಾರು ಮಳೆಯ ರೂಪದಲ್ಲಿ ಪಡೆಯುತ್ತಿದ್ದು,ಕೃಷಿ ಕ್ಷೇತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
Next Story





