ಉಡುಪಿ: ಗೋ ಹತ್ಯೆ ನಿಷೇಧಿಸುವಂತೆ ಅಭಯಾಕ್ಷರ ಸಲ್ಲಿಕೆ

ಉಡುಪಿ, ಫೆ.25: ಭಾರತೀಯ ಗೋ ಪರಿವಾರ ಜಿಲ್ಲಾ ಘಟಕದ ವತಿಯಿಂದ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ಒಂದು ಲಕ್ಷ ಅಭಯಾಕ್ಷರ ಅರ್ಜಿಗಳನ್ನು ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಮನವಿಯನ್ನು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಗೋಪರಿವಾರ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಸಂಚಾಲಕ ಗುಣವಂತೇಶ್ವರ ಭಟ್, ಹವ್ಯಕ ಮಹಾಸಭಾದ ಎಸ್.ಎಲ್ ಕಾರ್ಣಿಕ್, ನಿವೃತ್ತ ಪ್ರಾಂಶುಪಾಲರಾದ ಎಂ.ಆರ್.ಹೆಗ್ಡೆ, ಬಾಲಚಂದ್ರ ಕಾರ್ಣಿಕ್, ಪುಣ್ಯಕೋಟಿ ಬಳಗದ ಜ್ಯೋತಿ ದೇವಾಡಿಗ, ತಾರಾ, ಕುಂದಾಪುರ ತಾಲೂಕು ಗೋಪರಿವಾರ ಅಧ್ಯಕ್ಷ ಪುಷ್ಪರಾಜ್, ಸಂಚಾಲಕ ಮಂಜುನಾಥ ಉಪಸ್ಥಿತರಿದ್ದರು.
Next Story





