ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ‘ಹಸಿರು ಆಸ್ಪತ್ರೆ’ ಪ್ರಶಸ್ತಿ

ಉಡುಪಿ, ಫೆ.25: ಫಲಿತಾಂಶದ ಆಧರಿತ ಆರೋಗ್ಯ ರಕ್ಷಣಾ ವಿತರಣಾ ವ್ಯವಸ್ಥೆಯಲ್ಲ್ಲಿ ಹೊಸದಿಲ್ಲಿಯ ಹೋಟೆಲ್ ರಾಡಿಸನ್ ಬ್ಲೂ ಕೌಶಂಬಿಯಲ್ಲಿ ಇತ್ತೀಚೆಗೆ ನಡೆದ 6ನೇ ಜಾಗತಿಕ ಸಮಾವೇಶದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘ (ಅಸೋಸಿಯೇಶನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಆಫ್ ಇಂಡಿಯಾ) ದಿಂದ ಹಸಿರು ಆಸ್ಪತ್ರೆ (ಗ್ರೀನ್ ಹಾಸ್ಪಿಟಲ್) ಪ್ರಶಸ್ತಿ ಲಭಿಸಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಹಾಗೂ ಸಂಸತ್ ಸದಸ್ಯ ಅನಿಲ್ ಅಗರ್ವಾಲ್ ಅವರು ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿ ತಂಡಕ್ಕೆ ಪ್ರದಾನ ಮಾಡಿದರು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಹಾಗೂ ಸಂಸತ್ ಸದಸ್ಯ ಅನಿಲ್ ಅಗರ್ವಾಲ್ ಅವರು ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿ ತಂಡಕ್ಕೆ ಪ್ರದಾನ ಮಾಡಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಕಾರ್ಯಾಚರಣೆ ವಿಭಾಗದ ಹಿರಿಯ ವ್ಯವಸ್ಥಾಪಕ ಜಿಬು ಥಾಮಸ್ ಮತ್ತು ಜೋಬಿತಾ ಬಾರ್ನೆಸ್ ರನ್ನೊಳಗೊಂಡ ತಂಡ, ಭಾರತೀಯ ಆರೋಗ್ಯ ಸೇವಾ ಪೂರೈಕೆದಾರರ ಸಂಘದ ಅಧಿಕಾರಿಗಳು ಮತ್ತು ಲೆಕ್ಕಪರಿಶೋಧಕರ ಆಸ್ಪತ್ರೆ ಭೇಟಿ ಮತ್ತು ಪರಿಶೀಲನೆ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿತ್ತು.
ಕೆಎಂಸಿ ತೆಗೆದುಕೊಂಡ ಪರಿಸರ ಸ್ನೇಹಿ ಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ. ಇವುಗಳಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿದ 720 ಕೆಬ್ಲುಪಿ ಸಾಮರ್ಥ್ಯದ ಸಂಪೂರ್ಣ ಸೌರ ಶಕ್ತಿ, ಅಪಘಾತ ಮತ್ತು ತುರ್ತು ಸೇವಾ ವಿಭಾಗ, ಮಹಿಳಾ ಮತ್ತು ಮಕ್ಕಳ ವಿಭಾಗ, ಬಹು ಅಂತಸ್ತಿನ ವಾಹನ ನಿಲುಗಡೆ, ಮರುಬಳಕೆ ನೀರು, ಎಲ್‌ಇಡಿ ದೀಪಗಳು, ಸ್ವಯಂಚಾಲಿತ ನಿಯಂತ್ರಣದ ಮೇಲೆ ಸಾಮಾನ್ಯ ಬೆಳಕಿನ ವ್ಯವಸ್ಥೆ ಸೇರಿವೆ.
‘ಈ ರಾಷ್ಟ್ರೀಯ ಮಟ್ಟದ ಗುರುತಿಸುವಿಕೆ, ದೀರ್ಘ ವರ್ಷಗಳ ಪರಿಸರ ಸ್ನೇಹಿ ಉಪಕ್ರಮಗಳ ಕೆಲಸದ ಸಾಧನೆಯಲ್ಲಿ ಆಸ್ಪತ್ರೆಯ ಮತ್ತೊಂದು ದೊಡ್ಡ ಸಾಧನೆ ಯಾಗಿದೆ. ಆಸ್ಪತ್ರೆಯು ತನ್ನ ಕಾರ್ಯಾಚರಣೆಗಳಲ್ಲಿ ಹೆಚ್ಚು ಶಕ್ತಿಯ ಉಳಿತಾಯ ಮತ್ತು ಸಂರಕ್ಷಣೆ ತಂತ್ರಗಳನ್ನು ಮುಂದುವರಿಸಲಿದೆ’ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಹೇಳಿದ್ದಾರೆ.







