ಸುಮನಸಾ ಕೊಡವೂರು ‘ರಂಗ ಹಬ್ಬ’ ಉದ್ಘಾಟನೆ

ಉಡುಪಿ, ಫೆ.25: ಸುಮನಸಾ ಕೊಡವೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ನಗರಸಭೆಯ ಸಹಕಾರದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳ ಲಾದ ಏಳು ದಿನಗಳ ರಂಗ ಹಬ್ಬವನ್ನು ವಿಶ್ವ ದಾಖಲೆಯ ಯೋಗ ಮತ್ತು ನೃತ್ಯಪಟು ತನುಶ್ರೀ ಪಿತ್ರೋಡಿ ಸೋಮವಾರ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ರಂಗ ಸಾಧಕ ಎನ್.ಆರ್.ಬಲ್ಲಾಳ ಅವರನ್ನು ಸನ್ಮಾನಿಸ ಲಾಯಿತು. ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ಆಶಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಮುಂಬೈಯ ರಂಗ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ, ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಯಶೆಧರ್ ಸಾಲ್ಯಾನ್ ಉಪಸ್ಥಿತರಿದ್ದರು.
ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್.ಭಟ್ ವಂದಿಸಿದರು. ದಯಾನಂದ ಯು. ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಸವದತ್ತಿ ರಂಗ ಆರಾಧನಾ ತಂಡದಿಂದ ‘ಗುಲಾಮನ ಸ್ವಾತಂತ್ರ ಯಾತ್ರೆ’ ನಾಟಕ ಪ್ರದರ್ಶನಗೊಂಡಿತು.







