ಉತ್ತರಾಖಂಡ, ಮಧ್ಯಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ

ಹೊಸದಿಲ್ಲಿ,ಫೆ.25: ಉತ್ತರಾಖಂಡ ಮತ್ತು ಮಧ್ಯಪ್ರದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಜೊತೆಯಾಗಿ ಎದುರಿಸುವುದಾಗಿ ಬಹುಜನಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಸೋಮವಾರ ಘೋಷಿಸಿದೆ. ಮಧ್ಯ ಪ್ರದೇಶದ 29 ಲೋಕಸಭಾ ಸ್ಥಾನಗಳಲ್ಲಿ ಎಸ್ಪಿ ಮೂರರಲ್ಲಿ ಸ್ಪರ್ಧಿಸುತ್ತಿದ್ದರೆ ಉತ್ತರಾಖಂಡದ ಐದು ಸ್ಥಾನಗಳಲ್ಲಿ ಒಂದರಲ್ಲಿ ಕಣಕ್ಕಿಳಿಯಲಿದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಬೆನ್ನಿಗೇ ಇತರ ಎರಡು ರಾಜ್ಯಗಳಲ್ಲೂ ಈ ಮೈತ್ರಿಯನ್ನು ಮುಂದುವರಿಸಲು ನಿರ್ಧರಿಸಿವೆ. ಉತ್ತರ ಪ್ರದೇಶದಲ್ಲಿ ತಲಾ 38 ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಎಸ್ಪಿ ಮತ್ತು ಬಿಎಸ್ಪಿ ಮೊದಲಿಗೆ ನಿರ್ಧರಿಸಿದ್ದರೂ ಸದ್ಯ ಸಮಾಜವಾದಿ ಪಕ್ಷ ಒಂದು ಸ್ಥಾನವನ್ನು ರಾಷ್ಟೀಯ ಲೋಕದಳಕ್ಕೆ ಬಿಟ್ಟುಕೊಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಮತ್ತು ಸೋನಿಯಾ ಗಾಂಧಿಯ ರಾಯ್ ಬರೇಲಿ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
Next Story





