ಕೆಎಸ್ಸಾರ್ಟಿಸಿಗೆ ಮೂರು ಸ್ಕೋಚ್ ಮೊಬಿಲಿಟಿ ಪ್ರಶಸ್ತಿ
ಬೆಂಗಳೂರು, ಫೆ.25: ಕೆಎಸ್ಸಾರ್ಟಿಸಿಗೆ ಎರಡು ಉಪಕ್ರಮಗಳಾದ ರಸ್ತೆ ಸುರಕ್ಷತೆ ಮತ್ತು ಸಿಮ್ಯುಲೇಟರ್ ಮೂಲಕ ಚಾಲನಾ ತರಬೇತಿ ಉಪಕ್ರಮಗಳಿಗೆ ಸ್ಕೋಚ್ ಮೊಬಿಲಿಟಿ ಮೂರು ಪ್ರಶಸ್ತಿಗಳು ಮತ್ತು ದೇಶದ ಉತ್ಕೃಷ್ಟ ಸಾರಿಗೆ ಉಪಕ್ರಮ ಪ್ರಶಸ್ತಿಗಳು ಲಭಿಸಿದೆ.
ನವದೆಹಲಿಯಲ್ಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್ನಲ್ಲಿ ನಡೆದ 56ನೇ ಸ್ಕೋಚ್ ಮೊಬಿಲಿಟಿ ಸಮ್ಮೇಳನದಲ್ಲಿ ನಿಗಮದ ಪರವಾಗಿ ಗಜೇಂದ್ರಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗರವರು ಮೊಬಿಲಿಟಿಯ ನಿವೃತ್ತ ಕಾರ್ಯದರ್ಶಿ ಡಾ.ಎಂ.ರಾಮಚಂದ್ರನ್ ಹಾಗೂ ನಿವೃತ್ತ ಅಭಿವೃದ್ಧಿ ಆರ್ಥಿಕ ತಜ್ಞ ಡಾ.ಅರುಣಾ ಶರ್ಮರವರಿಂದ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.
Next Story





