ಉಡುಪಿ, ಫೆ.25: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಫೆ. 21 ರಂದು ಬೆಳಗ್ಗೆ 9.30ರ ಸುಮಾರಿಗೆ ನಿಲ್ಲಿಸಿದ್ದ ಒಳಕಾಡು ನಿವಾಸಿ ಗಿರಿಧರ ನಾಯಕ್ ಎಂಬವರ 20,000 ರೂ. ಮೌಲ್ಯದ ಕೆಎ20-ಇಡಿ-4025 ನಂಬರಿನ ಸುಝುಕಿ ಎಕ್ಸೆಸ್ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.