ಮನೀಷ್ ಕೌಶಿಕ್ ಸೇರಿ ಮೂವರು ಸೆಮಿಗೆ
ಮ್ಯಾಕ್ರನ್ ಕಪ್ ಬಾಕ್ಸಿಂಗ್

ಹೊಸದಿಲ್ಲಿ, ಫೆ.25: ಇರಾನ್‌ನ ಚಬಹಾರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ರನ್ ಕಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮನೀಷ್ ಕೌಶಿಕ್ (60 ಕೆ.ಜಿ.) ಸೇರಿದಂತೆ ಭಾರತದ ಮೂವರು ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ. ಆ ಮೂಲಕ ಪದಕಗಳನ್ನು ಖಚಿತಪಡಿಸಿದ್ದಾರೆ.
ರವಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿರುವ ಕೌಶಿಕ್, ಸಾಲಾರ್ ವೌಮಿವಾಂಡ್ ಅವರನ್ನು 5-0ಯಿಂದ ಮಣಿಸಿದರು.
ಮಾಜಿ ರಾಷ್ಟ್ರೀಯ ಚಾಂಪಿಯನ್ ದುರ್ಯೋಧನಸಿಂಗ್ ನೇಗಿ (69 ಕೆ.ಜಿ.) ಹಾಗೂ ರೋಹಿತ್ ಟೋಕಾಸ್ ಟೂರ್ನಿಯ ಸೆಮಿಫೈನಲ್ ತಲುಪಿದ ಇತರ ಆಟಗಾರರಾಗಿದ್ದಾರೆ.
ಶನಿವಾರ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್‌ಕುಮಾರ್, ಮಂಜೀತ್ ಸಿಂಗ್ ಪಾಂಘಾಲ್, ಸಂಜೀತ್, ಲಲಿತ್ ಪ್ರಸಾದ್ ಹಾಗೂ ದೀಪಕ್ ಇದೇ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದರು. ಆ ಮೂಲಕ ಪದಕ ಖಚಿತಪಡಿಸಿದವರ ಸಂಖ್ಯೆ ಒಟ್ಟು 8ಕ್ಕೇರಿದೆ.
ರವಿವಾರನೇಗಿ ತಮ್ಮಎದುರಾಳಿಕಾಮ್ಯಾಬ್‌ಮೊರಾದಿಅವರವಿರುದ್ಧಸಂಪೂರ್ಣಪ್ರಾಬಲ್ಯಮೆರೆದರು. ಬಳಿಕಟೋಕಾಸ್‌ತುರ್ಕಮೆನಿಸ್ತಾನ್‌ನಟುಗ್ರುಯ್‌ಬಾಗ್‌ಅವರನ್ನು5-0ಯಿಂದಸೋಲಿಸಿದರು. ದಿನದಒಂದೇನಿರಾಸೆಯೆಂದರೆಭಾರತದಮನೀಷ್‌ಪಾನ್ವರ್‌ಅವರು(81 ಕೆ.ಜಿ.) ಕೆವಾನ್‌ಸಾರಿಎದುರು0-5 ರಿಂದಸೋಲುಅನುಭವಿಸಿದ್ದು.







