ರೆನಾ ಟಿ-20 ಕ್ರಿಕೆಟ್‌ನಲ್ಲಿ 8,000 ರನ್ ಗಳಿಸಿದ ಭಾರತದ ಮೊದಲ ಆಟಗಾರ

ಹೊಸದಿಲ್ಲಿ, ಫೆ.25: ಭಾರತದ ಹಿರಿಯ ದಾಂಡಿಗ ಸುರೇಶ್ ರೈನ ಪಾಂಡಿಚೇರಿ ವಿರುದ್ಧ ಸೋಮವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ಔಟಾದರು. ಆದಾಗ್ಯೂ ಟಿ-20 ಕ್ರಿಕೆಟ್‌ನಲ್ಲಿ 8,000 ರನ್ ಗಳಿಸಿದ ಭಾರತದ ಮೊದಲ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು.
ಉತ್ತರಪ್ರದೇಶದ ದಾಂಡಿಗ ರೈನಾ ತಾನಾಡಿರುವ 300 ಟಿ-20 ಪಂದ್ಯಗಳಲ್ಲಿ 33.47ರ ಸರಾಸರಿಯಲಿ 8,001 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 48 ಅರ್ಧಶತಕಗಳಿವೆ. ಎಂಎಸ್ ಧೋನಿ ಈತನಕ 300 ಟಿ-20 ಪಂದ್ಯಗಳನ್ನು ಆಡಿದ ಇನ್ನೋರ್ವ ಭಾರತೀಯ ಆಟಗಾರ. ರೈನಾ ಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದ 6ನೇ ದಾಂಡಿಗ. ಕ್ರಿಸ್ ಗೇಲ್(12,298 ರನ್), ಬ್ರೆಂಡನ್ ಮೆಕಲಮ್(9,922), ಕಿರೊನ್ ಪೊಲ್ಲಾರ್ಡ್(8838), ಶುಐಬ್ ಮಲಿಕ್(8,603) ಹಾಗೂ ಡೇವಿಡ್ ವಾರ್ನರ್(8,111)ಗರಿಷ್ಠ ಟಿ-20 ಸ್ಕೋರರ್‌ಗಳು. ರೈನಾ ಬೇಗನೆ ಔಟಾಗಿದ್ದರೂ ಉತ್ತರಪ್ರದೇಶ ತಂಡ ಪಾಂಡಿಚೇರಿಯನ್ನು 77 ರನ್‌ಗಳಿಂದ ಸೋಲಿಸಿತು. ಪ್ರಿಯಾಂ ಗರ್ಗ್(54) ಉ.ಪ್ರ. ಪರ ಗರಿಷ್ಠ ಸ್ಕೋರ್ ಗಳಿಸಿದರು. ಸೌರಭ್ ಕುಮಾರ್(4-14) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಉ.ಪ್ರ. ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿತು.





