ಡಿಜೆರ್‌ಗೆ ರಿಯೋ ಓಪನ್

ರಿಯೊ ಡಿ ಜನೈರೊ, ಫೆ.25: ಕೆನಡಾದ ಯುವ ಆಟಗಾರ ಫೆಲಿಕ್ಸ್ ಅಗರ್-ಅಲಿಯಾಸ್ಸಿಮ್‌ಗೆ 6-3, 7-5 ಸೆಟ್‌ಗಳ ಅಂತರದ ಸೋಲುಣಿಸಿದ ಸರ್ಬಿಯ ಆಟಗಾರ ಲಾಸ್ಲೊ ಡಿಜೆರ್ ರವಿವಾರ ರಾತ್ರಿ ರಿಯೊ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಕ್ಲೇ ಕೋರ್ಟ್ ಟೂರ್ನಿಯಾದ ರಿಯೋನಲ್ಲಿ 23 ವರ್ಷದ ಡಿಜೆರ್ ಫೈನಲ್‌ಗೆ ಸಾಗುವ ಹಾದಿಯಲ್ಲಿ ಅಗ್ರ ಶ್ರೇಯಾಂಕಿತ ಆಸ್ಟ್ರಿಯದ ಡೊಮಿನಿಕ್ ಥೀಮ್, ಜಪಾನ್‌ನ ಟ್ಯಾರೊ ಡೇನಿಯಲ್ ಹಾಗೂ ನಾರ್ವೆಯ ಕ್ಯಾಸ್ಪರ್ ರುಡ್‌ರಿಗೆ ಸೋಲುಣಿಸಿದ್ದರು. ಶನಿವಾರ ಬಲಿಗಾಲಿನ ನೋವಿನ ಕಾರಣ ಸೆಮಿಫೈನಲ್ ಪಂದ್ಯದಲ್ಲಿ ಸ್ಲೋವೆನಿಯದ ಅಲ್‌ಜಾಝ್ ನಿವೃತ್ತರಾದ ಕಾರಣ ಡಿಜೆರ್‌ಗೆ ವಾಕ್ ಓವರ್ ಸಿಕ್ಕಿತ್ತು.
Next Story





