ಪೂನಮ್ ಯಾದವ್‌ಗೆ ಬಂಗಾರ
ಹಿರಿಯರ ರಾಷ್ಟ್ರೀಯ ವೇಟ್‌ಲಿಫ್ಟಿಂಗ್

ವಿಶಾಖಪಟ್ಟಣ, ಫೆ.25: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವೇಟ್‌ಲಿಫ್ಟರ್ ಪೂನಮ್ ಯಾದವ್ 34ನೇ ಮಹಿಳೆಯರ ರಾಷ್ಟ್ರೀಯ ಹಿರಿಯರ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ.
ರೈಲ್ವೆ ತಂಡದ ಪೂನಮ್ ಒಟ್ಟು 220 ಕೆ.ಜಿ. ಭಾರ (ಸ್ನಾಚ್ 99 ಮತ್ತು ಕ್ಲೀನ್ ಆ್ಯಂಡ್ ಜೆರ್ಕ್ 121 ಕೆ.ಜಿ)ಎತ್ತುವ ಮೂಲಕ ಮಹಿಳೆಯರ 81 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ದಿಲ್ಲಿಯ ಸೀಮಾಗೆ ಬೆಳ್ಳಿ ಹಾಗೂ ಪಂಜಾಬ್‌ನ ಮನ್‌ಪ್ರೀತ್ ಕೌರ್ ಕಂಚಿನ ಪದಕ ಪಡೆದರು.
71ನೇ ಆವೃತ್ತಿಯ ಪುರುಷರ ಟೂರ್ನಿಯ 73 ಕೆ.ಜಿ. ವಿಭಾಗದಲ್ಲಿ ಪ.ಬಂಗಾಳದ ಅಚಿಂತ ಸೆವುಲಿ ಬಂಗಾರದ ಪದಕ ಗೆದ್ದರೆ, ಮಹಾರಾಷ್ಟ್ರದ ಅಕ್ಷಯ್ ಗಾಯಕ್ವಾಡ್ ಬೆಳ್ಳಿ ಹಾಗೂ ತಮಿಳುನಾಡಿನ ಎಂ. ರಂಜನ್ ಕಂಚಿನ ಪದಕ ಪಡೆದರು.
ಪುರುಷರ 81 ಕೆ.ಜಿ. ವಿಭಾಗದಲ್ಲಿ ಅಸ್ಸಾಂನ ಪಪುಲ್ ಚಾಂಗ್ಮಯಿ ಚಿನ್ನ, ಸರ್ವಿಸ್‌ನ ಸ್ಯಾಂಬೊ ಲಾಪಂಗ್ ಬೆಳ್ಳಿ ಹಾಗೂ ಪಂಜಾಬ್‌ನ ಅಮರ್ಜಿತ್ ಗುರು ಕಂಚಿನ ಪದಕ ಪಡೆದರು.
Next Story





