ಮೂರನೇ ಸ್ಥಾನಕ್ಕೇರಿದ ಕ್ವಿಟೋವಾ
ಡಬ್ಲುಟಿಎ ರ್ಯಾಂಕಿಂಗ್
ಪ್ಯಾರಿಸ್, ಫೆ.25: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿ ರನ್ನರ್ಸ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಪೆಟ್ರಾ ಕ್ವಿಟೋವಾ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದಾರೆ. ಜಪಾನ್ ಆಟಗಾರ್ತಿ ನಯೊಮಿ ಒಸಾಕಾ ವಿಶ್ವದ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಝೆಕ್ ಆಟಗಾರ್ತಿ ಕ್ವಿಟೋವಾ ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಒಸಾಕಾ ವಿರುದ್ಧ ಸೋತ ಬಳಿಕ 2ನೇ ರ್ಯಾಂಕಿಗೆ ತಲುಪಿದ್ದರು. ಶನಿವಾರ ಬೆಲಿಂಡಾ ಬೆನ್ಸಿಕ್ ವಿರುದ್ಧ ದುಬೈ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತಿರುವ ಕ್ವಿಟೋವಾ ಈ ವರ್ಷ ಮೂರನೇ ಬಾರಿ ಫೈನಲ್‌ಗೆ ತಲುಪಿದ್ದರು.
21ರ ಹರೆಯದ ಬೆನ್ಸಿಕ್ 2015ರ ಬಳಿಕ ಮೊದಲ ಪ್ರಶಸ್ತಿ ಜಯಿಸಿದ ಕಾರಣ 22 ಸ್ಥಾನ ಮೇಲಕ್ಕೇರಿ 23ನೇ ಸ್ಥಾನ ತಲುಪಿದ್ದಾರೆ.
Next Story





