Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ...

ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಶೂದ್ರರು

ಕಾಂಚ ಐಲಯ್ಯ ಶೆಫರ್ಡ್ಕಾಂಚ ಐಲಯ್ಯ ಶೆಫರ್ಡ್26 Feb 2019 12:11 AM IST
share
ಶೇ.10 ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಶೂದ್ರರು

ಭಾರತದ ಸಂವಿಧಾನದ 15(4)ನೇ ಪರಿಚ್ಛೇದದಲ್ಲಿ ‘ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರು’ ಎಂಬ ವ್ಯಾಖ್ಯಾನವು ದಲಿತರು/ ಆದಿವಾಸಿಗಳು/ ಒಬಿಸಿಗಳಿಗಲ್ಲದೆ ಜಮೀನು ಹೊಂದಿರುವ ಶೂದ್ರ ಜಾತಿಗಳಿಗೂ ಅನ್ವಯವಾಗುತ್ತದೆ.

ಪಟೇಲರು, ಜಾಟರು, ಗುಜ್ಜರರು, ಮರಾಠರು, ಕಾಪುಗಳು, ರೆಡ್ಡಿಗಳು, ಕಮ್ಮಗಳು, ಬಂಗಾಲದ ಎಲ್ಲ ಶೂದ್ರರು ಮತ್ತು ಇತರರು ಸೇರಿ ಭಾರತದ ಸಮಗ್ರ ಶೂದ್ರ ಸಮುದಾಯಗಳು ‘‘ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ’’ ವರ್ಗಗಳ ವ್ಯಾಪ್ತಿಗೆ ಸೇರುತ್ತವೆ.


ಭಾಗ-1

ಕೇಂದ್ರ ಸರಕಾರವು ಸಾಮಾನ್ಯವರ್ಗದ (ಜನರಲ್ ಕೆಟಗರಿ) ಶೇ. 10 ಮೀಸಲಾತಿ ತಂದ ಬಳಿಕ, ಆಂಧ್ರಪ್ರದೇಶ ಸರಕಾರವು ತನ್ನ ರಾಜ್ಯದ ಕಾಪು ಸಮುದಾಯಕ್ಕೆ ಮಾತ್ರ ಶೇ. 5 ಸೀಟುಗಳನ್ನು ಮತ್ತು ನೌಕರಿಗಳನ್ನು ನೀಡುವ ಒಂದು ಸರಕಾರಿ ಆಜ್ಞೆಯನ್ನು ಹೊರಡಿಸಿದೆ. ಉಳಿದ ಶೇ. 5 ಮೀಸಲಾತಿಯು ಇದುವರೆಗೆ ಮೀಸಲಾತಿ ಇಲ್ಲದ ಇತರ ಜಾತಿಗಳಿಗೆ ಎಂದು ಅದು ಹೇಳಿದೆ. ಗುಜ್ಜರರು, ಜಾಟರು, ಪಟೇಲರು ಮತ್ತು ಮರಾಠರು ಹಾಗೆ ಕಾಪುಗಳು ಕೂಡ ಮೀಸಲಾತಿಗಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ಸರಕಾರವು ತನ್ನ ರಾಜ್ಯದ ಒಳಗೆ ಮರಾಠರಿಗೆ ಶೇ. 16 ಸೀಟುಗಳನ್ನು ಮತ್ತು ನೌಕರಿಗಳನ್ನು ಮೀಸಲಾತಿಯಾಗಿ ನೀಡಿದೆ. ಇದು ಶೇ. 50 ಎಸ್ಸಿ/ಎಸ್ಟಿ/ಒಬಿಸಿ ಕೋಟಾವನ್ನು ಹೊರತುಪಡಿಸಿ ನೀಡಲಾಗಿರುವ ಮೀಸಲಾತಿ. ಅದು ಹೇಗೆ ಸರಕಾರ 16+50 ಅಂದರೆ ಒಟ್ಟು ಶೇ. 66 ಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತದೋ ಗೊತ್ತಿಲ್ಲ.

ಗುಜರಾತ್ ಸರಕಾರವು ಶೇ. 10 ಮೀಸಲಾತಿಯನ್ನು ಈ ಕೂಡಲೇ ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ. ಆದರೆ ಇದರಿಂದಾಗಿ, ಬಹಳ ಸಮಯದಿಂದ ಮೀಸಲಾತಿಗಾಗಿ ಚಳವಳಿ ನಡೆಸುತ್ತಿರುವ ಪಟೇಲರಿಗೆ ಲಾಭವಾಗುತ್ತದೆಯೇ?

ಕೇಂದ್ರ ಸರಕಾರದ ಹೊಸ ಶೇ. 10 ಮೀಸಲಾತಿಯು ಮೀಸಲಾತಿ ಇಲ್ಲದ ಶೂದ್ರ ಜಾತಿಗಳಿಗೆ ಏನು ಲಾಭ ಮಾಡುತ್ತದೆನ್ನುವುದು ನಿಜವಾಗಿಯೂ ತಿಳಿಯುವುದಿಲ್ಲ. ಇದು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಅವಕಾಶವಿರದ, ಗ್ರಾಮೀಣ ಒಳನಾಡುಗಳಲ್ಲಿ ವಾಸಿಸುತ್ತ ಬಂದಿರುವ ಶೂದ್ರ ಕೃಷಿ ಸಮುದಾಯಗಳನ್ನು, ಐತಿಹಾಸಿಕವಾಗಿ ಶಿಕ್ಷಣ ಸಮುದಾಯಗಳಾಗಿರುವ ಬ್ರಾಹ್ಮಣರು, ಬನಿಯಾಗಳು, ಕಾಯಸ್ತರು ಮತ್ತು ಖತ್ರಿಗಳೊಂದಿಗೆ ಸೇರಿಸಿಬಿಡುತ್ತದೆ. ಐತಿಹಾಸಿಕವಾಗಿ ಶೂದ್ರ ಕೃಷಿ ಸಮುದಾಯಗಳು, ಅಶಿಕ್ಷಿತರಾದ ಜಮೀನು ಉಳುವವರು, ಪಶುಪಾಲಕರು ಹಾಗೂ ಕುಶಲಕರ್ಮಿಗಳು. ಬ್ರಿಟಿಷರು ಭಾರತಕ್ಕೆ ಬರುವವರೆಗೆ ಇವರಿಗೆ ಶಿಕ್ಷಣ ಪಡೆಯುವ ಹಕ್ಕು ಇರಲಿಲ್ಲ. ಅಲ್ಲದೆ 16ನೇ ಶತಮಾನದವರೆಗೆ ಆಸ್ತಿಯ ಹಕ್ಕು ಕೂಡ ಇರಲಿಲ್ಲ. ಸುಮಾರು 200 ವರ್ಷಗಳ ಹಿಂದೆಯಷ್ಟೇ ಶೂದ್ರ ಭೂಮಾಲಕರ ಒಂದು ವರ್ಗ ಅಸ್ತಿತ್ವಕ್ಕೆ ಬಂತು. ಅವರಲ್ಲಿ ಕೆಲವರು ಜಮೀನುದಾರರ ವರ್ಗಕ್ಕೆ ಸೇರುವವರಾದರು. ಆದರೂ ಅವರ ಜಮೀನಿನ ಒಡೆತನ ಶತಮಾನಗಳವರೆಗೆ ನಿರಕ್ಷರತೆಯೊಂದಿಗೇ ಮುಂದುವರಿಯಿತು.

ಹಿಂದೂ ಯುಗದಲ್ಲಿ ಶೂದ್ರ ಭೂಮಾಲಕರಿಗೆ ಕೂಡ ಅವರ ಮಕ್ಕಳಿಗೆ ಸಂಸೃತದಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ನಿರಾಕರಿಸಲಾಗಿತ್ತು. ಮುಸ್ಲಿಂ ಆಳ್ವಿಕೆಯಲ್ಲಿ ಅವರಿಗೆ ಪರ್ಷಿಯನ್ ಭಾಷಾ ಶಿಕ್ಷಣವೂ ದೊರಕಲಿಲ್ಲ. ಭಾರತದಲ್ಲಿ ಬ್ರಿಟಿಷರು ಶಾಲೆಗಳನ್ನು ತೆರೆದ ಬಳಿಕವಷ್ಟೆ ಶೂದ್ರ ಸಾಮಾಜಿಕ ಶಕ್ತಿಗಳು (ಭೂಮಿ ಹೊಂದಿದವರಿರಲಿ ಅಥವಾ ಭೂರಹಿತರು ಇರಲಿ) ಶಾಲೆಗೆ ಹೋಗುವ ಹಕ್ಕು ಪಡೆದರು. ಬಾಂಬೆ ಪ್ರಾಂತದ ಮಹಾತ್ಮಾ ಜೋತಿರಾವ್ ಫುಲೆ ಇಂಗ್ಲಿಷ್ ಮತ್ತು ಮರಾಠಿ ಶಿಕ್ಷಣ ಪಡೆದ ಮೊತ್ತ ಮೊದಲ ಶೂದ್ರ.

ಭಾರತದ ಸಂವಿಧಾನದ 15(4)ನೇ ಪರಿಚ್ಛೇದದಲ್ಲಿ ‘ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರು’ ಎಂಬ ವ್ಯಾಖ್ಯಾನವು ದಲಿತರು/ ಆದಿವಾಸಿಗಳು/ ಒಬಿಸಿಗಳಿಗಲ್ಲದೆ ಜಮೀನು ಹೊಂದಿರುವ ಶೂದ್ರ ಜಾತಿಗಳಿಗೂ ಅನ್ವಯವಾಗುತ್ತದೆ.

ಪಟೇಲರು, ಜಾಟರು, ಗುಜ್ಜರರು, ಮರಾಠರು, ಕಾಪುಗಳು, ರೆಡ್ಡಿಗಳು, ಕಮ್ಮಗಳು, ಬಂಗಾಲದ ಎಲ್ಲ ಶೂದ್ರರು ಮತ್ತು ಇತರರು ಸೇರಿ ಭಾರತದ ಸಮಗ್ರ ಶೂದ್ರ ಸಮುದಾಯಗಳು ‘‘ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ’’ ವರ್ಗಗಳ ವ್ಯಾಪ್ತಿಗೆ ಸೇರುತ್ತವೆ.

ಈ ಸಮುದಾಯಗಳ ಯುವ ಜನತೆಗೆ (ಹುಡುಗಿಯರಿಗೆ ಮತ್ತು ಹುಡುಗರಿಗೆ) ಕೇಂದ್ರೀಯ ಸೇವೆಗಳಲ್ಲಿರುವ ಬ್ರಾಹ್ಮಣರು, ಬನಿಯಾಗಳು, ಕಾಯಸ್ತರು ಮತ್ತು ಖತ್ರಿಗಳೊಂದಿಗೆ ಸ್ಪರ್ಧಿಸುವಂತೆ ಹೇಳಿದರೆ, ಶೂದ್ರರು ಎಂದಿಗೂ ಸ್ಪರ್ಧಿಸಲಾರರು. ಯಾಕೆಂದರೆ, ಆ ಜಾತಿಗಳಲ್ಲಿರುವವರು(ಈಗ) ಇಂಗ್ಲಿಷ್ ಶಿಕ್ಷಣದ ಪರಂಪರೆ ಹೊಂದಿದವರು, ಹಿಂದೆ ಪರ್ಷಿಯನ್ ಶಿಕ್ಷಣ ಮತ್ತು ಅದಕ್ಕೂ ಮೊದಲು ಸಂಸ್ಕೃತ ಶಿಕ್ಷಣದ ಬೇರುಗಳನ್ನು ಹೊಂದಿದವರು. ಮಂಡಲ್ ಮೀಸಲಾತಿ ಜಾರಿಗೆ ಬಂದ ನಂತರ ಈ ಎಲ್ಲ (ಮೀಸಲಾತಿ ಹೊಂದಿಲ್ಲದ) ಶೂದ್ರ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಓಪನ್ ಕೆಟಗರಿಯಲ್ಲಿ ಯಾವ ಲಾಭವೂ ಆಗದೆ ಇರಲು ಇದೇ ಕಾರಣ. ಮೇಲ್ಕಾಣಿಸಿದ ಮುಂದುವರಿದ ಜಾತಿಗಳು ಶಿಕ್ಷಣದಲ್ಲಿ ಮೀಸಲಿಟ್ಟಿದ್ದ ಸೀಟುಗಳನ್ನು ಮತ್ತು ಸರಕಾರದ ನೌಕರಿಗಳನ್ನು ತಮ್ಮ ಪಾಲಾಗಿಸಿಕೊಂಡವು. ಹಾಗಾಗಿ ಶೂದ್ರ ಸಮುದಾಯದ ಮೇಲ್ಪದರದ ಮಂದಿ ಇದನ್ನು ಮನಗಂಡು ಮೀಸಲಾತಿಗಳಿಗಾಗಿ ಚಳವಳಿಗಳನ್ನು ಆರಂಭಿಸತೊಡಗಿದರು. ಈ ಮೇಲ್ಪದರ ಸಮುದಾಯದ ಶೂದ್ರ ಜಮೀನ್ದಾರರು ತಮ್ಮ ಜಾತಿಗಳನ್ನು ಮೀಸಲಾತಿ ಯಾದಿಯಲ್ಲಿ ಸೇರಿಸುವುದು ತಮ್ಮ ಘನತೆಗೆ ಕುಂದು ಎಂದು ಭಾವಿಸಿದ್ದರು.

ಸಮಾಜ ಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಹೇಳಿದ ಹಾಗೆ ಅವರಲ್ಲಿ ಹಲವರು ತಮ್ಮನ್ನು ನವ-ಕ್ಷತ್ರಿಯರು ಎಂದು ಪರಿಗಣಿಸುತ್ತಿದ್ದರು. ಅವರು ಸಂಸ್ಕೃತೀಕರಣ ಅಥವಾ ಬ್ರಾಹ್ಮಣೀಕರಣದ ಹಾದಿಯಲ್ಲಿದ್ದರು. ಅವರಲ್ಲಿ ಕೆಲವರು ಸಸ್ಯಾಹಾರಿಗಳಾದದ್ದು ಕೂಡಾ ಅವಾಗಲೇ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇರ್ಪಡೆಗೆ ಮುಖ್ಯ ನೇಮಕಾತಿ ಮೂಲವಾದರು. ಅದು (ಆರೆಸ್ಸೆಸ್) ಅವರನ್ನು ಶ್ರೇಷ್ಠ ಹಿಂದುಗಳೆಂದು ಬಿಂಬಿಸಿದೆ ಮತ್ತು ಮಾಂಸಾಹಾರ ತ್ಯಜಿಸುವಂತೆ ಅವರಿಗೆ ಹೇಳಿದೆ.

ಊಳಿಗ ಮಾನ್ಯಪದ್ಧತಿ (ಫ್ಯೂಡಲಿಸಂ) ನಿಧಾನವಾಗಿ ಅವಸಾನ ಹೊಂದಿದಾಗ ಮತ್ತು ಭಾರತವು ಜಾಗತೀಕರಣ ಹಾಗೂ ಉದಾರೀಕರಣದ ಹಂತದಲ್ಲಿ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಮೀಸಲಾತಿ ಇಲ್ಲದ ಶೂದ್ರರು ಎಚ್ಚೆತ್ತುಕೊಂಡರು. ಅಖಿಲ ಭಾರತ ಸೇವೆಗಳಲ್ಲಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳಂತಹ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಮತ್ತು ಐಐಟಿ, ಐಐಎಂಗಳಂತಹ ಸಂಸ್ಥೆಗಳಲ್ಲಿ ಹಿಂದಿನ ಶೂದ್ರ ಜಮೀನ್ದಾರರ ಮಕ್ಕಳಿಗೆ ಸೀಟುಗಳು ಮತ್ತು ನೌಕರಿಗಳು ಸಿಗುತ್ತಿಲ್ಲ, ಸಿಗಲಾರವು ಎಂಬುದನ್ನು ಮನಗಂಡರು. ಈಗ ಕೂಡ ಯಾರು ಬೇಕಾದರೂ ಇಂತಹ ಸಂಸ್ಥೆಗಳ ದತ್ತಾಂಶಗಳನ್ನು ಗಮನಿಸಿ ಈ ಕುರಿತಾದ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಳ್ಳಬಹುದು.

(ಮುಂದುವರಿಯುವುದು) 

ಕೃಪೆ: countercurrents

share
ಕಾಂಚ ಐಲಯ್ಯ ಶೆಫರ್ಡ್
ಕಾಂಚ ಐಲಯ್ಯ ಶೆಫರ್ಡ್
Next Story
X