ಮಾ. 5ರಂದು ವೆನ್ಲಾಕ್ ನಲ್ಲಿ ಸಿಬ್ಬಂದಿ ನೇಮಕ; ಸಂದರ್ಶನ
ಮಂಗಳೂರು, ಫೆ. 26: ನಗರದ ವೆನ್ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ನಲ್ಲಿ ಗಣಕಯಂತ್ರ ಆಪರೇಟರ್ ಹುದ್ದೆ ಹಾಗೂ ಗ್ರೂಪ್ ‘ಡಿ’ ಹುದ್ದೆಯನ್ನು ದಿನಗೂಲಿ ನೆಲೆಯಲ್ಲಿ ಹಾಗೂ ಒಂದು ಕಮ್ಯೂನಿಟಿ ಹೆಲ್ತ್ ನರ್ಸಿಂಗ್ ಬೋಧನಾ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮಾ. 5ರಂದು 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಮಾ.5ರಂದು ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ, ವೆನ್‌ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ, ಮಂಗಳೂರು ಇಲ್ಲಿ ಇಲ್ಲಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ, ವೆನ್‌ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮಂಗಳೂರು ಕಚೇರಿ ದೂ.ಸಂ.: 0824- 2478930, 9448108880 ಅಥವಾ ಖುದ್ದಾಗಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್‌ನ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.
Next Story





