ಅತಿಥಿ ಬೋಧಕರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಫೆ.26: ಮಣಿಪಾಲ ಪ್ರಗತಿನಗರದಲ್ಲಿರುವ ಸರಕಾರಿ ಕೈಗಾರಿಕಾ ಸಂಸ್ಥೆ (ಐಟಿಐ) ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಮೆಕ್ಯಾನಿಕಲ್ ಡಿಪ್ಲೋಮ/ಬಿಇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ಸಂಸ್ಥೆಗೆ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0820-2986145ನ್ನು ಸಂಪರ್ಕಿಸುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





